ಭಾರತದ ಮಾನ್‌ಸಿಂಗ್ ಅವರು ಹಾಂಗ್‌ಕಾಂಗ್‌ನಲ್ಲಿ ನಡೆದ ಏಶಿಯನ್ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಗಂಟೆ 2:14.19 ನಿಮಿಷದಲ್ಲಿ ಅವರು ಗುರಿ ಮುಟ್ಟಿದರು. ಕಳೆದ ವರುಷ ಮುಂಬಯಿಯಲ್ಲಿ ನಡೆದ ಇದೇ ಮ್ಯಾರಥಾನ್‌ನಲ್ಲಿ ಅವರು 2:10.58 ವೇಗ ಸಾಧಿಸಿದ್ದರು.

ಚೀನಾದ ಚೀನಾದ ಹುವಾಂಗ್ ಯಾಂಗ್ ಜೆಂಗ್ ಬೆಳ್ಳಿ ಗೆದ್ದರೆ, ಕಿರ್ಗಿಸ್ತಾನದ ತಿಯಾಪಿನ್ ಲಿಯು ಕಂಚು ಜಯಿಸಿದರು‌. ಭಾರತದ ಇನ್ನೊಬ್ಬ ಸ್ಪರ್ಧಿ ಎ. ಪಿ. ಬೆಳ್ಳಿಯಪ್ಪ 6ನೇ ಸ್ಥಾನಿ ಆದರು.