ಕಡಲಾಚೇ ತೀರ,..ಬರಬೇಡ ನೀನು..
ಕುಡ್ಯಾವು ಕಾರ್ಮೋಡ
ಸುರಿಸುವವು ಹಿಮದವರ್ಷ..
ನೀ ನೆಡೆವ, ಹಾದಿ ತುಂಬೆಲ್ಲ ಹರವಿ...
ಕಾದಾವ ಕಪ್ಪೆ ಚಿಪ್ಪ...
ಎಡ ..ಬಲದಿ ಮುತ್ತು ಮಾಡುವವು ಮರಳು.
ಆ, ಕಡಲಗಾಳಿ ತುಸು ನಾಚಿ ಓಡಿ..
ನಿನ್ನ ಸೋಕಲೇಂದೆ,ಸೂಸುವುದು ತಂಗಾಳಿ..
ಕಡಲ,ಹಕ್ಕಿಯಲ್ಲ ಎಡೆ ಬಿಡದೆ ಹಾರಿ..
ಮಾಡುವವು ನಿನಗೆ ಮೋಡಿ...
ನಿನ್ನ ಸ್ಪರ್ಶದಿಂದ ಕಡಲೂಪ್ಪು ನೀರು..
ಸಿಹಿ ಎಳೆ ನೀರ ಹನಿಯು ನೋಡ..
ಕಡಲ ಕೆನ್ನೈದಿಲೇಯಲ್ಲ..
ಮೈ ಕೊಡವಿ ಬಿರಿದು...
ತಮ್ಮೆಡೆಗೆ ,ಸೆಳೆಯುವವು,ನೋಡ..
ಕಡಲ ಚಿಟ್ಟೆಗಳೇಲ್ಲಾ ,ಗುಟ್ಟಾಗಿ ಸೇರಿ..
ಒಟ್ಟಾಗಿ ಮುತ್ತಿಕ್ಕೂವವು..
ನಿನ್ನ ಮೈಯ ಮೇಲೆ ನೋಡ..
ಕಡಲಯಾನಕೆಂದು ಬರಬೇಡ ನೀನು..
ಕಡಲೊಳಗಿನ ಬೆಟ್ಟ ಗುಡ್ಡವನೇಲ್ಲ ..
ಸುತ್ತಿಸುವ ನೆಪದಲ್ಲಿ ಕಾದವಳೇ..
ಕಡಲ್ಗುದುರೆಯನೇರಿ ಬರುತಾಳೆ ..
ಕಡಲಪ್ಸರೆಯು ,ನಿನ್ನ ಬಳಿಸಾಗಿ ತಾನು..
ಕಡಲ್ ಹಾದಿಯಲಿ ಚಿನ್ನ ಕದಿಯುವಳು ನಿನ್ನ ಮಾನಸನ್ನ...
ಕಡಲಾಚೇ ತೀರ ಬರಬೇಡ ನೀನು..
ಕುಡ್ಯಾವು ಕಾರ್ಮೋಡ ....
ಸುರಿಸುವವು ಹಿಮದವರ್ಷ...
ನೀ ನೆಡೆವ ಹಾದಿ ತುಂಬೆಲ್ಲ ಹರವಿ...
ಕಾದವ ಕಪ್ಪೆ ಚಿಪ್ಪ....
ಎಡ ..ಬಲದಿ ಮುತ್ತು ಮಾಡುವವು ಮರಳು...
ರಚನೆ:- ಪ್ರೀತಿ ಮಾಂತೇಶ ಬನ್ನೇಟ್ಟಿ.
ವಿಜಯಪುರ ಜಿಲ್ಲೆ .