ಹೆಬ್ರಿ : ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ವತಿಯಿಂದ ಅತ್ಯುತ್ತಮ ವೈಧ್ಯಕೀಯ ಸೇವೆಗಾಗಿ ಡಾ.ಹೆಬ್ರಿ ಮೋಹನದಾಸ ಶೆಣೈ ಮತ್ತು ಡಾ ಶಕುಂತಳ ಶೆಣೈ ಅವರನ್ನು ಶನಿವಾರ ಗೌರವಿಸಲಾಯಿತು. ಅಂದು ಹೆಬ್ರಿಯ ಗ್ರಾಮೀಣ ಪ್ರದೇಶದಲ್ಲಿ ಕಲಿತು ಉನ್ನತ ಶಿಕ್ಷಣ ಪಡೆದು ದೇಶ ವಿದೇಶದಲ್ಲಿ ಸೇವೆ ಸಲ್ಲಿಸಿ ಜನಮೆಚ್ಚುಗೆ ಪಡೆದ ಡಾ.ಹೆಬ್ರಿ ಮೋಹನದಾಸ ಶೆಣೈ ಮತ್ತು ಡಾ ಶಕುಂತಳ ಶೆಣೈ ಅವರನ್ನು ಶನಿವಾರ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ವತಿಯಿಂದ ಮನುಕುಲಕ್ಕೆ ಸಲ್ಲಿಸಿದ ಅತ್ಯುತ್ತಮ ಮಾನವೀಯ ವೈಧ್ಯಕೀಯ ಸೇವೆಗಾಗಿ ಗೌರವಿಸಲಾಯಿತು.

ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಸ್ಥಾಪಕ ಅಧ್ಯಕ್ಷ ಎಚ್‌. ದಿನಕರ ಪ್ರಭು ಮತ್ತು ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಡಾ.ಭಾಗ೯ವಿ ಐತಾಳ್‌ ಅಭಿನಂದಿಸಿದರು. ಡಾ. ಮೋಹನದಾಸ್‌ ಶೆಣೈ ದಂಪತಿಗಳು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ಲಯನ್ಸ್‌ ಕ್ಲಬ್‌ ಪೂವ೯ಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಕಾಯ೯ದಶಿ೯ ಕಬ್ಬಿನಾಲೆ ರಾಮಚಂದ್ರ ಭಟ್‌, ಲಿಯೋ ಅಧ್ಯಕ್ಷ ನಿರೀಕ್ಷಿತ್‌,ಸುಜಾತ ಹರೀಶ್‌ ಪೂಜಾರಿ, ಜ್ಯೋತಿ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.