ಬಂಟ್ಟಾಳ: ಲೋರೆಟ್ಟೋ ಮಾತಾ ಚರ್ಚಿನ ಧರ್ಮಗುರುಗಳಾದ ವಂದನಿಯ ಎಲಿಯಾಸ್ ಡಿಸೋಜ ಅವರು ಜುಲೈ 29 ರಂದು ಪಾಲಡ್ಕ ಸಂತ ಇಗ್ನೇಷಿಯಸ್ ಲೋಯೆಲ್ಲಾ ಚರ್ಚ್ ಧರ್ಮಗುರುಗಳಾಗಿ ವರ್ಗಾವಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಅವರನ್ನು ಚರ್ಚ್ ಪಾಲನಾ ಮಂಡಳಿ ಹಾಗೂ ಎಲ್ಲಾ ಭಕ್ತಾದಿಗಳ ಪರವಾಗಿ ಬೀಳ್ಕೊಡುಗೆ ಸಮಾರಂಭ ಪವಿತ್ರ ಬಲಿಪೂಜೆಯ ನಂತರ ಚರ್ಚನಲ್ಲಿ ನಡೆಯಿತು. ಬಾಂಬಿಲ್ ಚರ್ಚ್ ಧರ್ಮಗುರುಗಳಾದ ಹಾಗೂ ಲೋರೆಟ್ಟೋ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ವಂದನಿಯ ಪೀಟರ್ ಗೊನ್ಸಲ್ವಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪಾಲನ ಮಂಡಳಿಯ ಕಾರ್ಯದರ್ಶಿಯಾದ ಆಲ್ವಿನ್ ಪಿಂಟೊ ಸನ್ಮಾನ ಪತ್ರ ವಾಚಿಸದರು.
ಪಾಲನಾ ಮಂಡಳಿ ಉಪಾಧ್ಯಕ್ಷರಾದ ಐಸಾಕ್ ವಾಸ್ ರವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ನಿರ್ಮಲ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಆಗ್ನೆಸ್ ಅಂದ್ರಾದೆ ರವರು ಹೂಗುಚ್ಛ ನೀಡಿ ಅಭಿನಂದಿಸಿದರು. ಚರ್ಚಿನಲ್ಲಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ವಾರ್ಡ್ ಗಳ ಗುರ್ಕರ್ ರವರು ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಧರ್ಮಗುರುಗಳು ತನ್ನ ಆರು ವರ್ಷದ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲಾರನ್ನೂ ಕೃತಜ್ಞತೆಯಿಂದ ಸ್ಮರಿಸಿದರು.