ಆಗಸದೊಳು ಆವಾಸ ಮಾಡಬಯಸುವ

ಹಕ್ಕಿಗೆ ಬೇಕು ಬಂಗಾರ ಪಂಜರದಿ ಮುಕ್ತಿ....

ಹಕ್ಕಿಯ ಬೆಂಬಲಿಸಲು ಆಗುನೀ

ಪಟದ ಸೂತ್ರ ಹಿಡಿದ ವ್ಯಕ್ತಿ...


ಬಯಸಿದ ಪಡೆಯಲು ಹಕ್ಕಿಯ

ಬಳಿ ಇಲ್ಲಾ ಬೇಕಾದ ಶಕ್ತಿ

ಆದರೆ ಹಿಡಿದ ಹಟದ ಸಫಲತೆಗೆ

ಬಳಸುವುದು ಬೇಕಾದ ಯುಕ್ತಿ....


ಬಾಳು ಮನುಜ ಆಗುವವರೆಗೆ

ನಿನ್ನ ಮಾತೊಂದು ಉಕ್ತಿ

ಅದು ಸಾಧ್ಯ ಆದಾಗ ಮಾತ್ರ

ನೀನೊಂದು ನೈಜ ವ್ಯಕ್ತಿ....


ಭೂಮಾತೆಯ ಗರ್ಭದಿಂ ಹೊರಬಂದ

ಜೀವಕೆ ಗಗನ ಕುಸುಮವೀ ಮುಕ್ತಿ

ಸಖ್ಯವೆನಿಸುವುದೀ ಜೀವಕೆ ವಿರಕ್ತಿ…

          

                                                                                     -ಮಾಗಿದ ಮನಸ್ಸು