ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಪದವಿ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗಗಳು ಜಂಟಿಯಾಗಿ ಹಿಂದಿ ಸಾಹಿತ್ಯದ ಕುರಿತಾಗಿ ರಾಷ್ಟ್ರಮಟ್ಟದ ಇ-ಕ್ವಿಜ್‌ನ್ನು ಜುಲೈ 23 ರಿಂದ 27 ರವರೆಗೆ ಆಯೋಜಿಸಿವೆ. ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಯಾವುದೇ ನೋಂದಣಿ ಶುಲ್ಕ ಇಲ್ಲ. ಆಸಕ್ತರು ಆಮಂತ್ರಣ ಪತ್ರಿಕೆಯಲ್ಲಿರುವ NATIONAL LEVEL HINDI E-QUIZ 2020 ಎಂಬ ಲಿಂಕನ್ನು ಬಳಸಿ ಪಾಲ್ಗೊಳ್ಳಬಹುದು ಎಂದು, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಹಿಂದಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಟಿ. ರೋಡನ್ನವರ್, ಪದವಿ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ರಾವ್ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9945959416.
