ಮಂಗಳಾದೇವಿಯ ಮಿತ್ರರಾದ ಮನಿಶ್ ರವರ ತಾಯಿಯು ಕೋವಿಡ್ ನಿಂದ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಕರ್ನಾಟಕ ಸರಕಾರದ ಮಾಜಿ ಆರೋಗ್ಯ ಸಚಿವರು ಹಾಗೂ ಶಾಸಕರು ಯುಟಿ ಖಾದರ್ ಮತ್ತು ಮಾಜಿ ಸರಕಾರಿ ಮುಖ್ಯ ಸಚೇತಕರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ ಸಂತಾಪ ವ್ಯಕ್ತ ಪಡಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಹಾಯವಾಣಿ ತಂಡದ ಸದಸ್ಯರಾದ ಪ್ರವೀಣ್ ಚಂದ್ರ ಆಲ್ವಾ, ಅನಿಲ್ ಕುಮಾರ್, ವಿನಯ ರಾಜ್ ಚೇತನ್, ರಮಾನಂದ್ ಪೂಜಾರಿ, ಮುಂತಾದವರು ಭಾಗವಹಿಸಿ ಹಿಂದೂಧರ್ಮ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.