ಮೂಡುಬಿದಿರೆ:- ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜು ಇದರ 2020-21 ನೇಯ ಸಾಲಿನ ಆನ್ ಲೈನ್ ತರಗತಿಗಳ ಆರಂಭ 21.09.2020 ರಂದು ಮಧ್ಯಾಹ್ನ 12.30 ಕ್ಕೆ ಸಂಸ್ಥೆ ಯ ಸ್ಥಾಪಕ ಅಧ್ಯಕ್ಷ ರಾದ ಸ್ವಸ್ತಿಶ್ರೀ ಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ದೀಪ ಬೆಳಗಿಸಿ ಶ್ರೀ ಮಠದ ಬಳಿಯ ಭಟ್ಟಾರಕ ಭವನದಲ್ಲಿ ನೆರವೇರಿಸಿದರು ಹಾಗೂ ಕೊವಿಡ್ 19 ರ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರು ಸಮಸ್ಯೆ ಎದುರಿಸಿತ್ತಿರುದು ದುರದೃಷ್ಟಕರ ನಾವು ಎಲ್ಲರೂ ಉತ್ತಮ ಅರೋಗ್ಯ ಕಾಪಾಡಬೇಕಾಗಿದೆ ಮತ್ತು ಸದ್ಯ ತಾತ್ಕಾಲಿಕವಾಗಿ ಅನ್ ಲೈನ್ ಶಿಕ್ಷಣವನ್ನು ಪಡೆಯುದರ ಮೂಲಕ ಸಧ್ಯದ ಸಮಸ್ಯೆ ಎದುರಿಸಬೇಕು.
ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಕಡೆ ಗಮನವಿಟ್ಟು ಓದುವುದು, ಮೊಬೈಲ್ ಆನ್ ಲೈನ್ ತರಗತಿ ಹಾಜರಾಗಿ ಏಕಾಗ್ರತೆಯಿಂದ ಪಠ್ಯ ಆಲಿಸುದು, ತರಗತಿ ಮುಗಿದ ಕೂಡಲೆ ಹೆತ್ತವರು ವಿದ್ಯಾರ್ಥಿಗಳಿಂದ ಮೊಬೈಲ್ ವಾಪಸ್ಸು ಪಡೆದು ಮಕ್ಕಳು ಅಭ್ಯಾಸ ದ ಕಡೆ ಹಾಗೂ ಅರೋಗ್ಯ ದ ಕಡೆ ಗಮನ ನೀಡಿ ಸಹಕರಿಸಬೇಕೆಂದು ತಿಳಿಸಿದರು. ದೇಶ ಎದುರಿಸುತ್ತಿರುವ ತಾತ್ಕಾಲಿಕ ಸಮಸ್ಯೆ ಯನ್ನು ತಾಳ್ಮೆ , ಸಂಯಮ, ವಿವೇಕದಿಂದ ಎದುರಿಸೋಣ ಎಂದು ತಿಳಿಸಿದರು.ವಿದ್ಯಾರ್ಥಿ ಕ್ಷೇಮ ಪಾಲಕ ಹಿರಿಯ ನ್ಯಾಯ ವಾದಿ ಬಾಹುಬಲಿ ಪ್ರಸಾದ್ ವಿದ್ಯಾರ್ಥಿಗಳು ಆನ್ ಲೈನ್ ತರಗತಿಯ ಸದುಪಯೋಗ ಪಡಿಸಿಕೊಂಡು ಉತ್ತಮ ಅಂಕ ಪಡೆಯಲು ಕರೆ ನೀಡಿದರು.
ಉಪನ್ಯಾಸಕಿ ಸುಷ್ಮಾ ಈ ಬಾರಿಯ ಕಾಲೇಜು ಚಟುವಟಿಕೆ ಬಗ್ಗೆ ವರದಿ ಓದಿದರು. ವಿದ್ಯಾರ್ಥಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಂಶುಪಾಲೆ ಸೌಮ್ಯ ಸ್ವಾಗತಿಸಿದರು. ದ್ವಿತೀಯ ಪಿಯು ವಿವಿಧ ವಿಷಯಗಳಲ್ಲಿ100% ಫಲಿತಾಂಶ ಬರಲು ಕಾರಣರಾದ ಉಪನ್ಯಾಸಕರಾದ ನೇಮಿರಾಜ್, ಮಾನಸ, ಸುಷ್ಮಾ, ಸರಸ್ವತಿ, ಇವರನ್ನು ನಗದು ಪುರಸ್ಕಾರ ನೀಡಿ ಶ್ರೀ ಗಳು ಹರಸಿದರು. ಯಂ ಬಾಹುಬಲಿ ಪ್ರಸಾದ್ ರವರನ್ನು ಕಾಲೇಜು ಪರವಾಗಿ ಶ್ರೀ ಗಳವರು ಶಾಲು ಹಾರ ಶ್ರೀ ಫಲ ಮಂತ್ರಾಕ್ಷತೆ ನೀಡಿ ಹರಸಿ ಆಶೀರ್ವದಿಸಿದರು. ಉಪನ್ಯಾಸಕ ರಾದ ಧಾಮಿನಿ, ಜಿನೇಂದ್ರ ಬಲ್ಲಾಳ್ ಉಪಸ್ಥಿತರಿದ್ದರು.