ಮೂಡುಬಿದಿರೆ:- ಜಗತ್ ಪ್ರಸಿದ್ದ  ಸಾವಿರ ಕಂಬ ದ ಬಸದಿ, ಪ್ರಾಚೀನ ಗ್ರಂಥ, ಬಿತ್ತಿ ಚಿತ್ರ ಗಳಿರುವ ಶ್ರೀ ಜೈನ ಮಠ, ಗುರು ಬಸದಿ ಸೇರಿದಂತೆ 18 ಪವಿತ್ರ ಬಸದಿ 18 ದೇಗುಲ 18 ಕೆರೆ 18 ಕೇರಿ ಗಳಿರುವ ಪವಿತ್ರ ಪರಂಪರೆಯ ತಾಣ ನಮ್ಮ ಜೈನ ಕಾಶಿ ಮೂಡುಬಿದಿರೆಯಲ್ಲಿ ಧವಲತ್ರಯ ಜೈನ ಕಾಶಿ ಟ್ರಸ್ಟ್  ಹಾಗೂ ಶ್ರೀ ಜೈನ ಮಠ ಮೂಡುಬಿದಿರೆ ಯ ಜಂಟಿ ಆಶ್ರಯ  ದಲ್ಲಿ  ಪರಂಪರೆ ಹಾಗೂ ಶಾಸ್ತ್ರೀಯ ನೃತ್ಯ ಕಲಾ  ಪ್ರತಿಭೆ ಗಳಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಭಾರತೀಯ ರಂಗ ಕಲೆಗಳಲ್ಲಿ  ನೃತ್ಯ ಪ್ರಕಾರಗಳಾದ ಭರತ ನಾಟ್ಯ , ಜನ ಪದ, ಯಕ್ಷಗಾನ ಮುಂತಾದ  ನೃತ್ಯ ಸಾದರ ಪಡಿಸಲು  ಸಾವಿರ ಕಂಬದ ಬಸದಿ  ಭೈರದೇವಿ ಮಂಟಪದಲ್ಲಿ ಈಗಾಗಲೇ ಹೆಸರು ನೋಂದಾಯಿಸಿಕೊoಡ ಪ್ರತಿಭಾನ್ವಿತ ಕಲಾವಿದರಿಂದ ರವಿವಾರ 27 ಸೆಪ್ಟೆಂಬರ್ 2020 ರಂದು, ನಾಳೆ ಬೆಳಿಗ್ಗೆ 10.00 ರಿಂದ ಅಪರಾಹ್ನ  5.00 ರವರೆಗೆ  ಹಾಗೂ 5.30 ರಿಂದ 6.00 ರ ವರೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ( ರಿ ) ವತಿಯಿಂದ ವೈವಿಧ್ಯ ಮಯ ಕಾರ್ಯಕ್ರಮ ಜರುಗಲಿದೆ. 

ಸಾರ್ವಜನಿಕರಿಗೆ ಕೋವಿಡ್ 19 ಕಾರಣ  ಬಸದಿಗೆ ಬರದೆ ಮನೆಯಲ್ಲೆ ಕಾರ್ಯಕ್ರಮ ಫೇಸ್ಬುಕ್ ಪೇಜ್ ಮೂಲಕ  ವೀಕ್ಷಣೆ ಮಾಡಬಹುದಾಗಿದೆ. ಹೆಸರು ನೊಂದಾವಣೆ ಮಾಡಿ ಭಾಗವಹಿಸುವ ಎಲ್ಲಾ ಹಿರಿ ಕಿರಿ ಕಲಾವಿದರಿಗೆ ಧವಳತ್ರ ಯ ಟ್ರಸ್ಟ್  ಹಾಗೂ ಶ್ರೀ ಜೈನ ಮಠ ವತಿಯಿಂದ  ಪ್ರಶಂಸಾ ಪತ್ರ ನೀಡಲಾಗುದು.  

ಕಾರ್ಯಕ್ರಮ ಫೇಸ್ಬುಕ್  ಲೈವ್ ಮೂಲಕ ಸ್ಪಿರಿಚುವಲ್  -ಡಿವೋಷನ್  ಪೇಜ್ (Facebook page  -Spirituval Devotion), ಕರ್ನಾಟಕದಲ್ಲಿ ಜೈನ ಧರ್ಮ, ಮಕ್ಕಿಮನೆ ಕಲಾ ವ್ರoದ ಪೇಜ್ ನಲ್ಲಿ ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿ ಕುಳಿತು ಕಾರ್ಯಕ್ರಮ 

ವೀಕ್ಷಿಸಲು ವ್ಯೆವಸ್ಥೆ ಮಾಡಲಾಗಿದೆ, ಎ೦ದು ಶ್ರೀ ಜೈನ ಮಠ ಮೂಡುಬಿದಿರೆ ವ್ಯೆವಸ್ಥಾಪಕರು ಸಂಜಯಂಥ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.