ಮಂಗಳೂರು:- ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಮಂಗಳೂರು ಸೈಕಲ್ ಕ್ಲಬ್ ಇದರ ಸಂಯುಕ್ತ ಆಶ್ರಯದಲ್ಲಿ  ದಿನಾಂಕ 26-09-2020 ರಂದು ಮಂಗಳೂರಿನಲ್ಲಿ  ಫಿಟ್ ಇಂಡಿಯಾದ 1 ನೇ ವರ್ಷದ ಭಾಗವಾಗಿ ಸೈಕಲ್ ಜಾತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 ಕಾರ್ಯಕ್ರಮಕ್ಕೆ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆಯವರು ಚಾಲನೆ ನೀಡಿ ಫಿಟ್ ಇಂಡಿಯಾದ ಚಟುವಟಿಕೆಗಳ  ಮೂಲಕ ಯುವಕರು, ಯುವತಿಯರು ಹಾಗೂ ಹಿರಿಯರು ನಾಗರಿಕರು ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಸೈಕ್ಲಿಂಗ್ ಕ್ಲಬ್‍ನ ಅನಿಲ್ ಶೇಟ್, ನೆಹರು ಯುವ ಕೇಂದ್ರದ ತಾಲೂಕು ಪ್ರತಿನಿಧಿಗಳಾದ ವಿಕಾಸ್ ಹಾಗೂ ಪ್ರೀತೇಶ್ ರವರು ಬಾಗವಹಿಸಿದ್ದರು, ಈ ಜಾತಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ವಿಷೇಶವಾಗಿ ಹಿರಿಯನಾಗರಿಕರಾದ ಪಿ.ಎ.ಮೊಹಮ್ಮದ್ ಹಾಗೂ ಜೋಸೆಫ್ ರವರು ಭಾಗವಹಿಸಿದ್ದು ಜಾತಾಗೆ ಇನ್ನಷ್ಟು ಮೆರುಗನ್ನು ತಂದುಕೊಂಟ್ಟಿತು. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.