ಮೂಡುಬಿದಿರೆ:- ದಿನಾಂಕ 26.10.2020 ರಂದು ಇಕ್ವಾಕ್ಷು ವಂಶದ 14ನೇ ಮನು ಆದಿನಾಥರ ಕಾಲದಿಂದ ಜೈನಧರ್ಮೀಯರಲ್ಲಿ ಪ್ರಚಲಿತ ಇರುವ ನವರಾತ್ರಿ ಹಾಗೂ ವಿಜಯ ದಶಮಿ ಪರ್ವ ಜೈನ ಕಾಶಿಯಲ್ಲಿ  ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ  ಶ್ರೀಶ್ರೀಗಳು ಇಂದು ಬೆಳಿಗ್ಗೆ 5.00 ರಿಂದ ಶ್ರೀ ಮಠದಲ್ಲಿ  ಪ್ರತಿ ಕ್ರಮಣ, ಭಕ್ತಿ,ಸಾಮಯಿಕವನ್ನು  ಮಾಡಿ ಬೆಳಿಗ್ಗೆ 8.00 ಕ್ಕೆ ಶ್ರೀ ಮಠದಲ್ಲಿ ಕದಿರು ಹಬ್ಬ ನಿಮಿತ್ತ ಸರಳ ಮೆರವಣಿಗೆಯಲ್ಲಿ ಜೈನ ಪೇಟೆಯ ಕದಿರು ಕಟ್ಟೆಯಿಂದ ತಂದ ಭತ್ತದ ತೆನೆಗೆ ಶ್ರೀ ಮಠದಲ್ಲಿ ಧಾನ್ಯ ಲಕ್ಷ್ಮಿ ಪೂಜೆ ಭೂಮಿ ಪೂಜೆ ನಿತ್ಯ ನಿಯಮ ಪೂಜೆ ಅಭಿಷೇಕ ಆರತಿ ಯನ್ನು ಪರಂಪರೆಯಂತೆ ಗುರು ಬಸದಿ ಅರ್ಚಕರು ಪಟ್ಟದ ಪುರೋಹಿತರು ನೆರವೇರಿಸಿದರು.

 ಅನಂತರ  ಶ್ರೀ ಗಳು ಬೆಳಿಗ್ಗೆ 10. 35ಕ್ಕೆ ಶ್ರೀ  ಜೈ ನ ಮಠದಲ್ಲಿ ವಿಶೇಷ ಅಭಿಷೇಕ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವರ್ಷದಲ್ಲಿ ನಾಲ್ಕು ಬಾರಿ ಶ್ರೀ ಮಠದಲ್ಲಿ ನಡೆಯುವ ದೇವ ಕಾರ್ಯದಲ್ಲಿ ಪಾಲ್ಗೊಂಡು 18 ಬಸದಿಯ ಅರ್ಚಕರಿಗೆ ಶ್ರೀ ಮಠದ ವತಿಯಿಂದ ದಾನ ನೆರವೇರಿಸಿದರು, ಜಿನೇಂದ್ರ ಭಗವಂತರಿಗೆ ಅರ್ಗ್ಯ ಸಮರ್ಪಿಸಿದರು, ಪಟ್ಟದ ಪುರೋಹಿತ ಪಾರ್ಶ್ವನಾಥ ಇಂದ್ರ ಶ್ರೀ ಗಳ ಸಿಂಹಾಸನ ಪೂಜೆ ನೆರವೇರಿಸಿ ಪೂರ್ವಚಾರ್ಯರಿಗೆ ಅರ್ಗ್ಯ ಎತ್ತಿದರು. 

ಆಶೀರ್ವಾಚನ ನೀಡಿದ ಶ್ರೀ ಗಳವರು ಈ ದಿನ ವಿಜಯ ದಶಮಿ ಭರತ ಚಕ್ರವರ್ತಿ ಧರ್ಮ ಸಿಂಹಾಸನದಲ್ಲಿ ಕುಳಿತು ದೇವರನ್ನು ಪೂಜಿಸಿದ ದಿನ ಜಗತ್ತಿನಲ್ಲಿ  ಅಹಿಂಸೆ ಸಾಮರಸ್ಯ ಶಾಂತಿ ನೆಲೆಯಾಗಲಿ, ಹೊಸ ಅಕ್ಕಿ ಊಟ ಮಾಡಿ ಸರ್ವರಿಗೂ ಉತ್ತಮ ಅರೋಗ್ಯ ಲೋಕದಲ್ಲಿ ರೋಗ ರುಜಿನ ಕಡಿಮೆಯಾಗಿ ಎಲ್ಲೆಡೆ  ಸುಭಿಕ್ಷೆ  ಉಂಟಾಗಲಿ ಎಂದು ಮೂಡುಬಿದಿರೆ ಭಟ್ಟಾರಕ ಶ್ರೀ ಗಳು ಪ್ರಾರ್ಥಿಸಿದರು.

 ಪಟ್ಣಶೆಟ್ಟಿ ಸುದೇಶ್ ಕುಮಾರ್, ಎ. ದಿನೇಶ್ ಕುಮಾರ್, ಮುಕ್ತೇಸರರು 18 ಬಸದಿ ಅರ್ಚಕರು, ವ್ಯವಸ್ಥಾಪಕ  ಸಂಜಯಂತ ಕುಮಾರ್ ಶೆಟ್ಟಿ, ಜಿನೇಂದ್ರ  ಬಲ್ಲಾಳ್ ಉಪಸ್ಥಿತರಿದ್ದರು. ಶ್ರೀಮಠದ  ವತಿಯಿ0ದ ಅಂತರ ಕಾಯ್ದು  ಸಾಮೂಹಿಕ ದೇವ ಕಾರ್ಯ ವ್ಯವಸ್ಥೆ ಮಾಡಲಾಗಿತ್ತು ಶ್ರೀ ಜೈನ ಮಠ  ಗುರುಬಸದಿ,ಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ  ಅಭಿಷೇಕ ಹಾಗೂ ಸಂಜೆ ಸಾವಿರ ಕಂಬ ಬಸದಿಯಲ್ಲಿ  ವಿಶೇಷ  ಪಂಚಾಮೃತ ಅಭಿಷೇಕ ನಡೆಯಿತು.