ಮೈಸೂರು: ಅರಮನೆ ಆವರಣದಲ್ಲಿ ನಂದಿಧ್ವಜಕ್ಕೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪೂಜೆ ಸಲ್ಲಿಸಿದರು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಬಳಿಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಆನಂತ್ರ ಅಭಿಮನ್ಯು ಹೊತ್ತಿದ್ದಂತ ಅಂಬಾರಿಯಲ್ಲಿನ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ಮೈಸೂರು ದಸರಾ -2020 ಸರಳವಾಗಿ ಆಚರಿಸಲಾಗುತ್ತಿದೆ. ಇಂದು ಜಂಬೂಸವಾರಿ ಕೂಡ ನಡೆದಿದ್ದು, ಮಧ್ಯಾಹ್ನ 2.59ರಿಂದ 3.20ರ ಅವಧಿಯಲ್ಲಿ ನಂದಿಧ್ವಜಕ್ಕೆ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪೂಜೆ ಸಲ್ಲಿಸಲಿದರು.
ಅಂಬಾರಿ ಕಟ್ಟುವ ಕಾರ್ಯ ಪೂರ್ಣಗೊಂಡ ನಂತ್ರ, ಅಭಿಮನ್ಯುವಿನ ಮೇಲೆ ಚಾಮುಂಡೇಶ್ವರಿ ವಿರಾಜಮಾನವಾಗಿ ಕಂಗೊಳಿಸುತ್ತಿತ್ತು. ಇದೇ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲು ರೆಡಿಯಾಗಿತ್ತು. ಚಿನ್ನದ ಅಂಬಾರಿ ಹೊತ್ತು ರಾಜಗಾಂಬೀರ್ಯದಲ್ಲಿ ವೇದಿಕೆಯತ್ತ ದಸರಾ ಗಜಪಡೆ ತೆರಳಿತು. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತ್ರ, ಸಿಎಂ ಯಡಿಯೂರಪ್ಪ ಅವರು, ಅರಮನೆ ಆವರಣಕ್ಕೆ ವಿಶೇಷ ಬಸ್ ಮೂಲಕವೇ ಆಗಮಿಸಿದರು. ಇವರೊಂದಿಗೆ ಸಚಿವರು, ಶಾಸಕರು ಹಾಗೂ ಆಹ್ವಾನಿತರಿದ್ದರು.
ಮಕರ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, 5ನೇ ಬಾರಿಗೆ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಈ ಮೂಲಕ ಜಾಲನೆಗೊಂಡಂತ ಜಂಬೂಸವಾರಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಹೊತ್ತ ಅಭಿಮನ್ಯು ಅರಮನೆಯ ಆವರಣದಲ್ಲಿ ಸಾಗಿತು. ಇದಕ್ಕೆ ಸರಳ ಹಾಗೂ ಕಾವೇರಿ ಸಾಥ್ ನೀಡಿದವು. ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಸಾಗಿದಂತ ಜಂಬೂ ಸವಾರಿಯ ಸರಳ ಮೆರವಣಿಗೆ, ಕೇವಲ 30 ರಿಂದ 40 ನಿಮಿಷಗಳಲ್ಲಿಯೇ ಮುಕ್ತಾಯಗೊಳ್ಳಲಿದೆ.