ಮಂಗಳೂರು (ಜುಲೈ 30):- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ವಿವಿಧ ವಿಭಾಗ, ಶಾಖಾ ಕಚೇರಿಗಳ ವ್ಯಾಪ್ತಿಯಲ್ಲಿ ಖಾಲಿ ಇವರು ವಿಶ್ವ ಮಳಿಗೆಗಳನ್ನು ಹಂಚಿಕೆಗಾಗಿ ಆಸಕ್ತ ಉದ್ದಿಮೆದಾರರುಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನ.
ವಿಶ್ವ ಕಾರ್ಯಾಗಾರವನ್ನು ವಿಶ್ವ ಯೋಜನೆಯಡಿ ನಿರ್ಮಿಸಲಾಗಿದ್ದು, ಮಳಿಗೆಯನ್ನು ಎಲ್ಲಿ ಹೇಗಿದೆಯೋ ಹಾಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ನಿವೇಶನದ ಜಾಗವು ನಿಗಮಕ್ಕೆ, ಗ್ರಾಮ ಪಂಚಾಯಿತಿ, ಸರ್ಕಾರಿ ಇಲಾಖೆ, ಖಾಸಗೀಯವರಿಗೆ ಸೇರಿದ್ದಾಗಿದ್ದು ಅದರಂತೆ ನಿವೇಶನದ ಮೌಲ್ಯವನ್ನು ನಿಗಧಿಪಡಿಸಲಾಗುವುದು, ಅಂತಯೇ ನಿಗಧಿಪಡಿಸುವ ನಿವೇಶನದ ಮೌಲ್ಯವನ್ನು ಪ್ರತ್ಯೇಕವಾಗಿ ನಿಗಮಕ್ಕೆ ಭರಿಸಬೇಕಾಗುತ್ತದೆ.
ಖಾಲಿ ಇರುವ ಮಳಿಗೆ ವಿವರ ಇಂತಿವೆ: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾವುರು ಎಂಬಲ್ಲಿ 1500 ಚದರ ಅಡಿಗಳಲ್ಲಿ ರೂ. 2,22,500 ಮಳಿಗೆ ಮೌಲ್ಯ/ ನಿವೇಶನದ ಮೌಲ್ಯ ಹೊರತುಪಡಿಸಿ ಸಾಮಾನ್ಯ ವರ್ಗದವರಿಗೆ ಭದ್ರತಾ ಠೇವಣಿ ರೂ. 22,500 ಹಾಗೂ ಪ.ಜಾತಿ/ಪ. ಪಂಗಡ ವರ್ಗದವರಿಗೆ ರೂ. 11,250 ನಿಗಪಡಿಸಲಾಗಿದೆ.
ಹೆಚ್ಚನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು-560010ನ್ನು ಸಂಪರ್ಕಿಸುವಂತೆ ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.