ಮಂಗಳೂರು (ಸೆಪ್ಟೆಂಬರ್ 18):-  ಹೊಸದಾಗಿ ನೊಂದಾಯಿತರಾದ ದ.ಕ. ಜಿಲ್ಲಾ ಪೌರರಕ್ಷಣಾ ತಂಡದ ಸ್ವಯಂಸೇವಕರಿಗೆ  ಸೆಪ್ಟೆಂಬರ್ 20 ರಂದು ಬೆಳಿಗ್ಗೆ “ಹೃದಯ ಸ್ತಂಭನದ ಸಂದರ್ಭದಲ್ಲಿ ಜೀವ ಮರುಪೂರಣ ಯಾಕೆ ಮತ್ತು ಹೇಗೆ?” ಎಂಬ ವಿಚಾರದ ಕುರಿತು ತರಬೇತಿ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಪೌರರಕ್ಷಣಾ ದಳದ ಮುಖ್ಯಪಾಲಕ ಡಾ|| ಮುರಲೀಮೋಹನ್ ಚೂಂತಾರು ತಿಳಿಸಿದ್ದಾರೆ.

      ಜಿಲ್ಲಾ ಗೃಹರಕ್ಷಕದಳ ಮೇರಿಹಿಲ್ ಇದರ ಕಚೇರಿ ಸಭಾಭವನದಲ್ಲಿ  ಈ ತರಬೇತಿ ನಡೆಯಲಿದೆ ಎಂದು ಜಿಲ್ಲಾ ಪೌರರಕ್ಷಣಾ ದಳದ ಪ್ರಕಟಣೆ ತಿಳಿಸಿದೆ