ಮಂಗಳೂರು (ಸೆಪ್ಟೆಂಬರ್ 18):- ಶ್ರೀ ಸಹರಾ ಪ್ರಕೃತಿ ಚಿಕಿತ್ಸಾ ಕೇಂದ್ರವು ಉಚಿತ ಚಿಕಿತ್ಸಾತ್ಮಕ ಯೋಗ ಥೆರಪಿ ಮರೆವು ಶಕ್ತಿಯನಿಯಂತ್ರಣಕ್ಕಾಗಿ ಹಿರಿಯ ನಾಗರಿಕರ ಆರೋಗ್ಯ ದೃಷ್ಠಿಯನ್ನು ಹೆಚ್ಚಿಸುವ ಸಲುವಾಗಿ ಒಂದು ವಾರದ ಉಚಿತ ಯೋಗ ಥೆರಪಿಯನ್ನು  ಸೆಪ್ಟೆಂಬರ್ 21 ರಿಂದ 26  ರವರೆಗೆ ಶ್ರೀ ಸಹರಾ ಪ್ರಕೃತಿ ಚಿಕಿತ್ಸಾ ಕೇಂದ್ರ ಶ್ರೀ ಲಕ್ಷ್ಮಿನಾರಾಯಣ ಕಾಂಪ್ಲೆಕ್ಸ್, ನ್ಯೂ ಚಿತ್ರ ಜಂಕ್ಷನ್, ಕಾರ್‍ಸ್ಟ್ರೀಟ್, ಮಂಗಳೂರು ಇಲ್ಲಿ ನಡೆಸಲಿದೆ.

   ಈ ಅವಕಾಶವನ್ನು ಜಿಲ್ಲೆಯಲ್ಲಿರುವ ಹಿರಿಯನಾಗರೀಕರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2491800, 8747900033 ಸಂಪರ್ಕಿಸುವಂತೆ ದ.ಕ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.