ಮಂಗಳೂರು: ಗೌಡ ಸಾರಸ್ವತ ಸಮಾಜದ ಪರಮ ಪೂಜ್ಯ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ  ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವು ಇದೇ ಬರುವ ದಿನಾಂಕ ೦2-09-2020 ರ ಬುಧವಾರ ಸಮಾಪನ ಗೊಳ್ಳಲಿರುವುದು ಈ ಪ್ರಯುಕ್ತ  ಶ್ರೀಗಳವರ ಚಾತುರ್ಮಾಸ ವ್ರತದ ಸೀಮೋಲಂಘನ ಕಾರ್ಯಕ್ರಮ ನಡೆಯಲಿದ್ದು , ನಮ್ಮ ಮಂಗಳೂರಿನ ಸಮಾಜ ಬಾಂಧವರಿಗೆ ಒದಗಿಬಂದ ಅಹೋಭಾಗ್ಯ. ದೇವಳದ  ಹಾಗೂ ಸಮಾಜ ಬಾಂಧವರ ವಿನಂತಿ ಮೇರೆಗೆ  ಶ್ರೀಗಳವರ  ಸೀಮೋಲಂಘನ ಕಾರ್ಯಕ್ರಮ ಪ್ರಯುಕ್ತ  ಶ್ರೀಗಳವರು  ಸಾಯಂಕಾಲ ಸಮಯ : 5:30 ಕ್ಕೆ ಶ್ರೀ ವೆಂಕರಮಣ  ದೇವಳಕ್ಕೆ ಭೇಟಿ ನೀಡಿ ವೀರ ವೆಂಕಟೇಶ ದೇವರ ದರ್ಶನ ಪಡೆಯಲಿದ್ದು ಬಳಿಕ ಸಮಸ್ತ  ಸಮಾಜ ದ ಪರವಾಗಿ ಶ್ರೀ ದೇವಳದ  ಆಡಳಿತ ಮಂಡಳಿ ಯವರಿಂದ ಶ್ರೀ ಗಳವರ  ಪಾದ ಪೂಜೆ ನೆರವೇರಲಿದೆ . ಬಳಿಕ ದೇವಳದಲ್ಲಿ  ಶ್ರೀಗಳವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿರುವುದು .  ಕೊರೋನಾ ಮಹಾಮಾರಿಯನ್ನು ತಡೆಗಟ್ಟು ವ ಹಿನ್ನೆಲೆಯಲ್ಲಿ ಸರಕಾರದ  ಆದೇಶ ಹಾಗೂ ನಿಯಮ ಪ್ರಕಾರ ದೇವಳದ ಒಳಗಡೆ 50 ಜನರಿಗಿಂತ ಹೆಚ್ಚು ಜನರು   ಪಾಲ್ಗೊಳ್ಳುವ ಅವಕಾಶ  ಇಲ್ಲದಿರುವುದರಿಂದ ದೇವಳದ ಆಡಳಿತ ಮಂಡಳಿ ಮತ್ತು ಅರ್ಚಕ ರಿಗೆ ಹಾಗೂ ವಿಶೇಷ ಆಹ್ವಾನಿತರಿಗೆ ಮಾತ್ರ ದೇವಳದ ಒಳಗಡೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ. ಸಮಾಜ ಬಾಂಧವರು ಎಲ್ಲರೂ ಸಹಕರಿಸಬೇಕಾಗಿ ಎ೦ದು ಆಡಳಿತ ಮಂಡಳಿ ವಿನಂತಿಸಿದ್ದಾರೆ.