"ಘನತೆವೆತ್ತ ಮಾಜಿ ರಾಷ್ಟಪತಿಗಳಾದ ಪ್ರಣವ್ ಮುಖರ್ಜಿಯವರು ಸ್ವರ್ಗಸ್ಥರಾದ ವಿಚಾರ ತಿಳಿಯಿತು. ಭಾರತದ ನೈತಿಕತೆಯನ್ನು ಉಳಿಸಿದ ಮೇರು ವ್ಯಕ್ತಿತ್ವಅವರದ್ದಾಗಿದೆ. ಹಿಂದೆ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದು ಆಡಳಿತಾತ್ಮಕವಾಗಿ ಅಪಾರ ಅನುಭವ ಹೊಂದಿದ ಅವರು ಭಾರತದ ರಾಷ್ಟ್ರಪತಿಯಾಗಿ ನೇಮಕಗೊಂಡರು".

"2015ರಲ್ಲಿ ಅವರಿಂದ ನಾನು ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿರುವುದು ಸ್ಮರಣೀಯವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ". -ಡಿ. ವೀರೇಂದ್ರ ಹೆಗ್ಗಡೆ