ಸನಿಹವಾಗ ಬಯಸುವ ನಿಷ್ಕಲ್ಮಶ ಸ್ನೇಹ
ಜೀವಿಗಳ ಬಂಧನದೊಳು ಬೆಚ್ಚಗಿರು...
ಕಪಟ ಸೂತ್ರಧಾರಿಗಳ ಕಲ್ಮಶಭರಿತ ಚಕಿತ
ಚಿತ್ತದ ಬಂಧವ ಕನಸಲೂ ಬಯಸದಿರು...
ತೋರಿಕೆಯೊಳು ಕಪ್ಪೆ ಚಿಪ್ಪಾಗು
ಮೌಲ್ಯದೊಳು ಚಿಪ್ಪೊಳಗಿಹ ಮುತ್ತಾಗು...
ಇಲ್ಲದಿಹದರ ಕುರಿತು ಕೊರಗದಿರು
ಮೌನದಿ ಜಯವ ಪಡೆಯುತಿರು...
ಅಹಃ ಎಂಬ ಅಡ್ಡಿಗೆ ಆಗಾಗ್ಗೆ ಹಾಕುತಿರು ಬ್ರೇಕು
ನಿನ್ನ ಬಾಳು ಬಂಗಾರವಾಗಲು ಜಗವ ನೀ ಅರಿಯಬೇಕು...
ನಿನಗೂ ಬರುವುದು ಸರಿಯಾದ ಸಮಯ
ಅದ ಮುಂಚೆ ನೀ ಎದುರಿಸಬೇಕಲವು ಪ್ರಣಯ-ಪ್ರಳಯ...
- - - ಮಾಗಿದ ಮನಸ್ಸು