ಮೂಡುಬಿದಿರೆ: ಅರುವತ್ತರ ದಶಕದಲ್ಲಿ ಮೂಡುಬಿದಿರೆಯ ಅಭಿವೃದ್ಧಿಯ ಮೂಲ ಹರಿಕಾರರಾಗಿದ್ದ ದಿ.ಜಿ.ವಾಸುದೇವ ಪೈಯವರ ಪತ್ನಿ ಜಿ.ಸುಶೀಲಾ ವಿ.ಪೈ (90ವ) ಮಾ 16ರಂದು ರಾತ್ರಿ ತಮ್ಮ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು. ಅವರು ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮೂಡುಬಿದಿರೆಯ ಸಮಾಜ ಮಂದಿರ ಸಭಾದ ವನಿತಾ ಸಮಾಜದಲ್ಲಿ ಅರುವತ್ತರ ದಶಕದಲ್ಲಿ ಸಕ್ರಿಯರಾಗಿದ್ದ ಅವರು ಅಂದಿನ ದಿನಗಳಲ್ಲಿ ಮೂಡುಬಿದಿರೆಯ ದಸರಾ ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಗಣ್ಯರಿಗೆ ತಮ್ಮ ಶಾಂತಿ ನಿವಾಸದಲ್ಲಿ ಅತಿಥಿ, ಸತ್ಕಾರ,ವಾಸ್ತವ್ಯ ಹೀಗೆ ಸಾಹಿತ್ಯ ಪರಿಚಾರಿಕೆಯಲ್ಲಿ ತನ್ನ ಪತಿಯೊಂದಿಗೆ ಗಮನಾರ್ಹ ಸೇವೆ ಸಲ್ಲಿಸಿದ್ದರು.

ಅವರ ಅಗಲಿಕೆಗೆ ಸಮಾಜ ಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಂತಾಪ ವ್ಯಕ್ತಪಡಿಸಿದ್ದಾರೆ.