ಮನದ ಮಲ್ಲಿಗೆ

ಘಮವ ನಿಲ್ಲಿಸಲು...

ಬಯಸುತಿದೆ ತೆರೆದ

ಒಲವ ಬಾಗಿಲು...


ಒತ್ತಾಯದಿ ಹೊಮ್ಮಿಸುತಿದೆ

ನಗುವಿನ ನಕಲು...

ಗಾಢವಾಗಿ ಕಾಡುತಿರಲು

ಅಂಜಿಕೆಯ ಅಳಲು...


ಹರಿಸಬೇಕು ಹತ್ತಿರದವರು

ಪ್ರೀತಿಯ ಹೊನಲು

ಹತ್ತಬೇಕೀಗ ಮದಿರೆಗೆ

ನಿದಿರೆಯ ಅಮಲು....

                                                                                      -ಮಾಗಿದ ಮನಸ್ಸು