ಮಂಗಳೂರು:- ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಡಿಕೆಶಿ “ಕಳೆದ 4 ತಿಂಗಳಿನಿಂದ ದೇಶಾದ್ಯಂತ ಕೊರೋನಾ ಲಾಕ್‍ಡೌನ್ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ಬಗ್ಗೆ ನಾವು ಕಾಂಗ್ರೇಸ್ ಪಕ್ಷದ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಪ್ರತಿ ಪ್ರತಿ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಹಾಗು ಇನ್ನಿತರ ಜಾಗ್ರತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಆರೋಗ್ಯ ಹಸ್ತ ಕಾರ್ಯಕ್ರಮದಡಿ ರಾಜ್ಯ ಮಟ್ಟದಲ್ಲಿ 30 ನಾಯಕರುಗಳನ್ನು 30 ಜಿಲ್ಲೆಗಳಿಗೆ ನೇಮಿಸಿ ಇದರೊಂದಿಗೆ ಆರೋಗ್ಯ ಕ್ಷೇತ್ರ ಹಾಗು ಇನ್ನಿತರ ಆರೋಗ್ಯ ಸಂಬಂಧಿ ಕ್ಷೇತ್ರದಲ್ಲಿ ಇರುವವರು ವಾರಿಯರಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೇಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ದ.ಕ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಇಲ್ಲಿ ಇರುವ ಸೋದರತ್ವ, ವಿಶ್ವಾಸ, ಅರ್ಹ ಜನಜೀವನ ಹಾಗು ಎಲ್ಲಾ ಕ್ಷೇತ್ರದಲ್ಲಿಯೂ ಇರುವಂತಹ ಜಿಲ್ಲೆಯಿಂದಲೆ ಈ ಕಾರ್ಯಕ್ರಮಗಳನ್ನು ಆರಂಭಿಸದ್ದು ಕೋವಿಡ್ 19ನ್ನು ವಿಶ್ವದಿಂದಲೆ ಒದ್ದೋಡಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆವೆ. ಇದರೊಂದಿಗೆ ಕಾಂಗ್ರೇಸ್ ಪಕ್ಷದ ಆಚಾರ ವಿಚಾರಗಳ ಬಗ್ಗೆಯೂ ಜನತೆಗೆ ತಿಳಯಲಿದೆ”.
“ಕೊರೋನಾದಲ್ಲಿಯೂ ಭ್ರಷ್ಟಚಾರ ಬಿಜೆಪಿ ಸರಕಾರದ ಸಂಸ್ಕಾರ" ಎಂಬ ಪುಸ್ತಕದ ಮೂಲಕ ಹಾಗು ಪತ್ರಿಕ ವರದಿಗಳನ್ನಾದರಿಸಿ ಈ ಸರಕಾರದಲ್ಲಿ ಯಾವ ಇಲಾಖೆಯಲ್ಲಿ ಯಾವ ರೀತಿಯ ಭ್ರಷ್ಟಚಾರ ನೆಡೆಯುತ್ತಿದೆ ಎನ್ನುವ ಬಗ್ಗೆ ಈ ರಾಜ್ಯದ ಜನತೆಗೆ ತಿಳಿಸುವಂತಹ ಕಾರ್ಯವನ್ನು ಮಾದುತ್ತಿದೆ,ಹೊರ ರಾಜ್ಯದ ಕಾರ್ಮಿಕರಿಗೆ ರಾಜ್ಯ ಸರಕಾರ ನೆಡೆದುಕೊಂಡ ರೀತಿ ಹಾಗು ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಲು ಅನಮಾನವೀಯ ರೀತಿಗಳನ್ನು ಖಂಡಿಸುವುದರಿಂದ ಒಂದು ವಾರಗಳ ಕಾಲ ಸರಕಾರಿ ಬಸ್ಸುಗಳ ಮೂಲಕ ಉಚಿತವಾಗಿ ಅವರ ಊರುಗಳಿಗೆ ತಲುಪಲು ಅವಕಾಶ ಮಾಡಿಕೊಟ್ಟಿದೆ".
“ಕೇವಲ ಬಾಯ ಮಾತಿನಲ್ಲಿಯೇ ಲಕ್ಷ ಕೋಟಿ ಬಿಡುಗಡೆ ಮಾಡುವ ಕೇಂದ್ರ ರಾಜ್ಯ ಸರಕಾರಗಳು ರೈತರಿಗೆ ಯಾವ ರೀತಿ ಸಹಾಯ ಮಾಡಿದೆ ಎನ್ನುವುದೆ ಯಕ್ಷ ಪ್ರಶ್ನೆ. ಕಾಂಗ್ರೇಸ್ ಪಕ್ಷದ ವತಿಯಿಂದ ನೇರವಾಗಿ ಸುಮಾರು 100 ಕೋಟಿ ರಾಸಾಯನಿಕ ಗೊಬ್ಬರ, ಅಕ್ಕಿ, ತರಕಾರಿ, ಹಣ್ಣು ಹಂಪಲುಗಳನ್ನು ಖರೀದಿಸಿ ಬಡವರಿಗೆ ವಿತರಿಸಲಾಗಿದೆ".
“ರಾಜ್ಯಾದ್ಯಂತ ಇರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಅವರ ಒತ್ತಾಯಕ್ಕೆ ಮಣೆದು ದರ ನಿಗದಿ ಮಾಡಿರುವ ಸರಕಾರದ ನೀತಿ ಖಂಡನೀಯ. ಇದರಲ್ಲಿ ಸರಕಾರಕ್ಕೂ ಪಾಲು ಇದೆ, ಆದರೆ ಈ ಇಂದಿನ ಸರಕಾರ ಆಯುಷ್‍ಮಾನ್ ಭಾರತ, ಆರೋಗ್ಯ ಶ್ರೀ ಮುಂತಾದ ಆರೋಗ್ಯ ಕಾರ್ಡುಗಳ ಮುಖಾಂತರ ರಾಜ್ಯದ ಬಡ ಜನರಿಗೆ ಉಚಿತ ಆರೋಗ್ಯ ಚಿಕಿತ್ಸೆಗಳನ್ನು ನೀಡಲು ಯೋಜನೆಗಳು ಇದ್ದರೂ, ಬಿಜೆಪಿ ಸರಕಾರದ ಖಾಸಗಿ ಲಾಬಿಗೆ ಮಣಿದು ದರ ನಿಗದಿ ಮಾಡಿರುವುದು ಖಂಡನೀಯ. ಎಲ್ಲಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು”.
“ರಾಜ್ಯ ಸರಕಾರದ ಸಚಿವರುಗಳು ಯಾವುದೇ ಭ್ರಷ್ಟಚಾರ ನಡೆದಿಲ್ಲ ಎನ್ನುವುದಿದ್ದರೆ ಈ ಹಿಂದೆ ಕಾಂಗ್ರೇಸ್ ಸರಕಾರ ಇರುವಾಗದಿಂದಲು ಹಾಗು ಪ್ರಸ್ತುತ ಆಗುವಂತಹ ಧರೋಡೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ, ಇದಕ್ಕಾಗಿ ನಾವೆಲ್ಲರೂ ಸಂಪೂರ್ಣ ಬೆಂಬಲ ನೀಡುತ್ತೇವೆ".
“ಸರಕಾರ ಕೊರೋನಾದಿಂದ ಸಾವನ್ನಪ್ಪದ ಕುಟುಂಬಸ್ಥರಿಗು ಲಕ್ಷಗಟ್ಟಲೆ ಬಿಲ್ ನೀಡುತ್ತಿದ್ದು, ಕೊರೋನಾಗಿಂತ ಭೀಕರ ಭ್ರಷ್ಟಚಾರ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿಯ ಯಾವಿದೆ ಮಂತ್ರಿಗಳು ಕೊರೋನಾ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿಲ್ಲ. ಈ ನಾಡು ಕಟ್ಟಲು ಸಹಕರಿಸಿದ ರಾಜ್ಯ ಹಾಗು ಹೊರದೇಶದವರಿಗೂ ಅವರ ಕಷ್ಟಗಳನ್ನು ಕೇಳಲು ಸಂಯಮ ಮತ್ತು ಸಮಯ ಇಲ್ಲದಂತಾಗಿದೆ. ಸರಕಾರದ ಕಿಟ್‍ಗಳನ್ನು ವಿತರಿಸಲು ಮೋದಿ ಚಿತ್ತ ಮತ್ತು ಬಿಜೆಪಿ ಪಕ್ಷದ ಚಿಹ್ನೆ ಹಾಕುತ್ತಿದ್ದು, ಇದರ ವಿರುದ್ಧ ದೂರು ನೀಡಿದರು ಬಂಧಿಸಲಾಗಲ್ಲಿಲ್ಲ. ವಿವಿಧ ವೃತ್ತಿಪರರಿಗೆ ಸಹಾಯವಾಗಲು ಹಲವಾರು ಕೋಟಿ ಬಿಡುಗಡೆ ಮಾಡಿದ್ದೇವೆ ಎನ್ನುತ್ತಿರುವ ಈ ಸರಕಾರದಲ್ಲಿ ಯಾರಿಗೂ ಲಭವಾಗಿಲ್ಲಿಲ್ಲ".
ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ್ಯ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕರಾದ ರಮನಾಥ್ ರೈ, ವಿನಯ ಕುಮಾರ್ ಸೊರಕೆ, ಐವನ್ ಡಿಸೋಜ, ಜೆ.ಆರ್ ಲೋಬೊ, ಮಿಥುನ್ ರೈ, ಅಭಯಚಂದ್ರ ಜೈನ್, ಕೆಪಿಸಿಸಿ ಕಾರ್ಯದರ್ಶಿ ಬಿ.ಕೆ ಸಲೀಮ್, ಶಕುಂತಲ ಶೆಟ್ಟಿ, ಮತ್ತಿತರು ಉಪಸ್ಥಿತಿಯಲ್ಲಿದ್ದರು.