ಮಂಗಳೂರು: ಕೋವಿಡ್ 19 ವೈರಾಣುವಿನಿಂದಾಗಿ ಮೃತರಾದ ಕೂಳೂರು ನಿವಾಸಿ, ಕಾಂಗ್ರೆಸ್ ಕಾರ್ಯಕರ್ತರಾದ ರೋನಿ ಡಿ'ಸೋಜಾರವರಿಗೆ ಶಾಸಕರಾದ ಯು.ಟಿ.ಖಾದರ್, ದ.ಕ.ಜಿಲ್ಲಾ ಕಾಂಗ್ರೆಸ್ ಕೋವಿಡ್ 19 ಸಹಾಯವಾಣಿಯ ಸಂಚಾಲಕರಾದ ಐವನ್ ಡಿ'ಸೋಜಾ, ಕಾರ್ಪೋರೇಟರ್ ಗಳಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ಮಾಜಿ ಕಾರ್ಪೋರೇಟರ್ ಮಹಮ್ಮದ್ ಕುಂಜತ್ತಬೈಲ್, ಸ್ಥಳೀಯ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಹಕೀಂ, ಸ್ಟ್ಯಾನಿ ಅಲ್ವರಿಸ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರುಗಳು ಅಂತಿಮ ವಿದಾಯವನ್ನು ಸಲ್ಲಿಸಿದರು.
ಕಾಂಗ್ರೆಸ್ ಕಾರ್ಯಕರ್ತರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಏಕಾಏಕಿ ಕೋವಿಡ್ 19 ಗೆ ಬಲಿಯಾದ ರೋನಿ ಡಿ'ಸೋಜಾರವರ ಮುಖದ ಮೇಲೆ ಗಾಜನ್ನು ಅಳವಡಿಸುವುದರ ಮೂಲಕ ಆಗಮಿಸಿದ ಎಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಯಿತು.ಅಂತ್ಯಕ್ರಿಯೆಯು ಕೂಳೂರು ಚರ್ಚಿನ ರೆ.ಫಾ.ವಿನ್ಸೆಂಟ್ ಡಿ'ಸೋಜಾರವರ ಆಶೀರ್ವಚನದೊಂದಿಗೆ ನಡೆಯಿತು.ರೋನಿ ಡಿ'ಸೋಜಾರವರ ಕುಟುಂಬದ ಸದಸ್ಯರೆಲ್ಲರು ಈ ವೇಳೆ ಉಪಸ್ಥಿತರಿದ್ದರು.