ಮಂಗಳೂರು (ಜುಲೈ 30):- ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಅತ್ಯತ್ತಮ ಸಾಧನೆ ಮಾಡಿದ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಮತ್ತು ನಾಗರೀಕ ಸೇವೆಯನ್ನು ಜಾರಿಗೊಳಿಸುವಲ್ಲಿ ಸುಧಾರಣೆ ಮಾಡಿರುವ ಅಧಿಕಾರಿ/ಸಂಸ್ಥೆಗೆ ಪ್ರಧಾನಮಂತ್ರಿ ಪ್ರಶಸ್ತಿಯನ್ನು ಅಕ್ಟೋಬರ್ 31 ರ ರಾಷ್ಟ್ರೀಯ ಏಕತಾ ದಿವಸದಂದು ಸ್ಟಾಚ್ಯೂ ಆಫ್ ಯುನಿಟಿ, ಕೆವಾಡಿಯಾ, ಗುಜರಾತ್‍ನಲ್ಲಿ  ಮಾನ್ಯ ಪ್ರಧಾನಮಂತ್ರಿಗಳು ಪ್ರಧಾನ ಮಾಡುವರು.

    2018 ಏಪ್ರಿಲ್ 1 ರಿಂದ 2020 ಮಾರ್ಚ್ 31 ರವರೆಗಿನ ಅವಧಿಯಲ್ಲಿ ಸಾಧಿಸಿರುವ ಪ್ರಗತಿಯನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

     ಒಟ್ಟು 15 ಪ್ರಶಸ್ತಿಗಳಿದ್ದು, ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಿ ನಾಗರೀಕ ಸೇವೆಯನ್ನು ನೀಡುವಲ್ಲಿ ಸುಧಾರಣೆ ಮಾಡಿರುವ ವಿಭಾಗಕ್ಕೆ 6 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಿಲ್ಲಾ ಇಲಾಖೆ/ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೊಸದಾಗಿ ಆವಿಷ್ಕರಿಸಿದ ಯೋಜನೆಗಳಿಗೆ ಜಿಲ್ಲಾ ರಾಜ್ಯ ಮತ್ತು ಕೇಂದ್ರ ಮಟ್ಟದ ತಲಾ 2 ಪ್ರಶಸ್ತಿಗಳಂತೆ ಒಟ್ಟು 6 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಿಲ್ಲೆಗಳ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳನ್ನು ಯಶಸ್ವಿಯಗಿ ಜಾರಿಗೊಳಿಸಿದವರಿಗೆ 2 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನಮಾಮಿ ಗಂಗೆ ಕಾರ್ಯಕ್ರಮಕ್ಕೆ 1 ಪ್ರಶಸ್ತಿಯನ್ನು ನೀಡಲಾಗುತ್ತದೆ.

     ಜಿಲ್ಲೆ/ಅನುಷ್ಠಾನಗೊಳಿಸುವ ಘಟಕ/ಸಂಸ್ಥೆಗಳು ತಾವು ಸಾಧನೆ ಗೈದಿರುವ ಕಾರ್ಯಕ್ರಮ ಯೋಜನೆಯ ಕುರಿತು ಸಂಕ್ಷಿಪ್ತ ಮಾಹಿತಿ ಹಾಗೂ ಪೂರಕ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು.

     ಈ ಪ್ರಶಸ್ತಿಗಳಿಗೆ ಆನ್‍ಲೈನ್ ನೋಂದಣಿ ಮಾಡಿಕೊಂಡು ಆಗಸ್ಟ್ 15 ರ ಒಳಗೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಶಸ್ತಿ ಪೋರ್ಟಲ್ ಲಾಗಿನ್ ಆಗುವ ವಿವರ ಇಂತಿವೆ: URL:pmawards.gov.in ,https://www.pmawards.gov.in/public/login

     ಹೆಚ್ಚಿನ ಮಾಹಿತಿಗೆ ಜಾಲತಾಣ ವಿಳಾಸ ತಿತಿತಿ.ಠಿmಚಿತಿಚಿಡಿಜs.gov.iಟಿ ದೂರವಾಣಿ ಸಂಖ್ಯೆ 080 22032659 ನ್ನು ಸಂಪರ್ಕಿಸಬಹುದು ಎಂದು ಆಡಳಿತ ಸುಧಾರಣೆ, ಸರ್ಕಾರದ ಉಪ ಕಾರ್ಯದರ್ಶಿ ಸ್ವರ್ಣಲತಾ ಎಂ ಭಂಡಾರೆ ಇವರ ಪ್ರಕಟಣೆ ತಿಳಿಸಿದೆ.