ಮಂಗಳೂರು:- ನಗರದ ಕುಲಶೇಖರ ಚರ್ಚ್ ಗೇಟ್ ಆಟೋರಿಕ್ಷಾ ಚಾಲಕ – ಮಾಲಕರ ಸಮಿತಿ, ಮಂಗಳೂರು ಇದರ ವತಿಯಿಂದ ವಾರ್ಷಿಕ ಮಹಾಸಭೆಯನ್ನು 18-10-2020ರಂದು ಆಯೋಜಿಸಲಾಗಿತ್ತು. ಸಂಘಕ್ಕೆ ಹೆಚ್ಚಿನ ಸಹಕಾರ ನೀಡುತ್ತಿರುವ ಮಾಜಿ ಸದಸ್ಯ ವಿನ್ಸೆಂಟ್ ಡಿ’ಕುನ್ಹಾರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಹಾಸಭೆಯ ಅಧ್ಯಕ್ಷತೆಯನ್ನು ಆಟೋರಿಕ್ಷಾ ಪಾರ್ಕಿನ ಗೌರವಾಧ್ಯಕ್ಷರಾದ ಅಲ್ಫೋನ್ಸ್ ಡಿ’ಸೋಜರವರು ವಹಿಸಿದರು. ಈ ಸಂದರ್ಭದಲ್ಲಿ ಪಾರ್ಕಿನ ಸದಸ್ಯರಾಗಿ ತನ್ನ ವೃತ್ತಿಯಲ್ಲಿ ನಿವೃತ್ತಿಹೊಂದುತ್ತಿರುವ ಸದಸ್ಯರಾದ ಅಲೋಶಿಯಸ್ ಫೆರ್ನಾಂಡಿಸ್‍ರವರನ್ನು ಸನ್ಮಾನಿಸಲಾಯಿತು. ಆಟೋರಿಕ್ಷಾ ಚಾಲಕ – ಮಾಲಕರ ಸಮಿತಿಯ ಅಧ್ಯಕ್ಷರಾದ ಜೋನ್ ಲೋಬೊ, ಉಪಾಧ್ಯಕ್ಷರಾದ ವಲೇರಿಯನ್ ಡಿ’ಸೋಜ, ಕಾರ್ಯದರ್ಶಿ ರಾಜೇಶ್ ಲೋಬೊ, ಸಹ ಕಾರ್ಯದರ್ಶಿ ಪುರುಷೋತ್ತಮ, ಖಜಾಂಚಿ ಅಲೋಶಿಯಸ್ ರೊಜಾರಿಯೋ ಹಾಗೂ ಪಾರ್ಕಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಅವಧಿಗೆ ಗೌರವಾಧ್ಯಕ್ಷರಾಗಿ ಅಲ್ಫೋನ್ಸ್ ಡಿ’ಸೋಜ, ಅಧ್ಯಕ್ಷ ಜೋನ್ ಲೋಬೊ, ಉಪಾಧ್ಯಕ್ಷ ವಲೇರಿಯನ್ ಡಿ’ಸೋಜ, ಕಾರ್ಯದರ್ಶಿ ರಾಜೇಶ್ ಲೋಬೋ ಸಹ ಕಾರ್ಯದರ್ಶಿ ಪುರಷೋತ್ತಮ, ಖಜಾಂಚಿ ಅನಿಲ್ ಮೆಲ್ವಿನ್ ಡಿಸಿಲ್ವರವರನ್ನು ಆಯ್ಕೆ ಮಾಡಲಾಯಿತು.