ಕಾರ್ಕಳ,(ಆಗಸ್ಟ್, 29): ಕಾರ್ಕಳ ಪುರಸಭಾ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದ ಎದುರಿನ ಕಂಕ್ರೀಟ್ ರಸ್ತೆ ದುರಸ್ತಿ ಕಾಮಗಾರಿಯು ಸೆಪ್ಟಂಬರ್ 2ರಿಂದ 3 ವಾರಗಳ ಕಾಲ ನಡೆಯಲಿರುವುದರಿಂದ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಬದಲಿ ರಸ್ತೆಯಾಗಿ ಲಘು ವಾಹನಗಳಿಗೆ ಕಟೀಲು ಇಂಟರ್ ನ್ಯಾಷ್‌ನಲ್ ಎದುರಿನ ರಸ್ತೆಯಾಗಿ ಶಾಂಭವಿ ರಸ್ತೆಯ ಮೂಲಕ ಪೆರ್ವಾಜೆ ರಸ್ತೆ ಸೇರುವುದು ಮತ್ತು ಘನವಾಹನಗಳಿಗೆ ಮುಖ್ಯರಸ್ತೆಯಲ್ಲಿ ಚಲಿಸಿ, ಕಲ್ಲೊಟ್ಟೆ ರಸ್ತೆಯ ಮೂಲಕ ಪೆರ್ವಾಜೆ ರಸ್ತೆಗೆ ಸಂಚರಿಸಿ ಸಾರ್ವಜನಿಕರು ಕಾಮಗಾರಿಗೆ ಸಹಕರಿಸುವಂತೆ ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.