ಮಂಗಳೂರು (ಆಗಸ್ಟ್ 29):- ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ LLPS 1 -18MGD ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‍ವೆಲ್‍ನ್ನು ಶುಚಿಗೊಳಿಸಲು ಸಪ್ಟೆಂಬರ್ 1 ರಂದು ಬೆಳಿಗ್ಗೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ 24 ಗಂಟೆ ಅವಧಿಯಲ್ಲಿ ಸುರತ್ಕಲ್ ಪಣಂಬೂರು, ಕುಳಾಯಿ, ಕಾನ, ಕಾಟಿಪಳ್ಳ, ಎನ್.ಐ.ಟಿ.ಕೆ ಸಸಿಹಿತ್ಲು, ಕೂಳೂರು, ಕೊಟ್ಟಾರ ಭಾಗಶಃ ಬೆಂದೂರು ಲೋ ಲೆವೆಲ್ ಪ್ರದೇಶಗಳಾದ ಕಾರ್‍ಸ್ಟ್ರೀಟ್, ಕುದ್ರೋಳಿ ಫಿಷಿಂಗ್ ಹಾರ್ಬರ್, ಕೊಡಿಯಾಲ್‍ಬೈಲ್ ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು. ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದನ್ನು ಸಾರ್ವಜನಿಕರು ಮನಗಂಡು ಮಹಾನಗರಪಾಲಿಕೆಯೊಂದಿಗೆ ಸಹಕರಿಸಲು ಮಂಗಳೂರು ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.