ಉಡುಪಿ,(ಆಗಸ್ಟ್, 29): ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕದ ಕನ್ನಡ ವಿಭಾಗ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಇವರ ಸಹಯೋಗದಲ್ಲಿ ಶಾರದಾ ಭಟ್ ದತ್ತಿನಿಧಿ ಉಪನ್ಯಾಸದ ವೆಬಿನಾರ್ ಅನ್ನು ಆಗಸ್ಟ್ 31 ರಂದು ಝೂಮ್ ಆ್ಯಪ್ ಮೂಲಕ ಆಯೋಜಿಸಲಾಗಿದ್ದು, ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಡಾ.ನರಸಿಂಹಮೂರ್ತಿ “ಕನ್ನಡ ಸಾಹಿತ್ಯಕ್ಕೆ ಕರಾವಳಿ ಲೇಖಕಿಯರ ಕೊಡುಗೆ” ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ನಿಕೇತನ ಅಧ್ಯಕ್ಷತೆಯನ್ನು ವಹಿಸಲಿದ್ದು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸುಜಯಾಕೆ.ಎಸ್., ಕ.ಲೇ.ವಾ. ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಭಟ್ ಯು. ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ (ಝೂಮ್ ಮೀಟಿಂಗ್ ಐಡಿ: 726 6856 3959, ಪಾಸ್‌ಕೋಡ್: 5ಇ4ಕಿಕಿ5) ತಿಳಿಸಿದೆ.
