ತಿಳಿದವರೂ ತಿಳಿಯದವರೂ ಹೇಳೋದೊಂದೇ

ರಾಜಕೀಯ ಎಂಬುದು ಕೆಸರಿನ ಕುಂಟೆ

ಒಂದು ಬಾರಿ ಬಿದ್ದರಿದರಲ್ಲಿ ಮತ್ತೇ

ನಾವು ಶುದ್ಧ ಆಗಲುಂಟೆ..!


ತುಘಲಕ್ ದರ್ಬಾರ್ ನಂತೆ ಕೆಸರಿನ ಪುಷ್ಪ

ನೀಚವಾಗಿ ನಡೆಸುತ್ತಿದೆ ಭರ್ಜರಿ ಭೇಟೆ

ಇದಕ್ಕೆ ಬಲಿಯಾಗುತ್ತಿರುವವರಿಗೆ ಮುಂದೆ

ಜನತಾ ಜನಾರ್ದನನ ಮನ್ನಣೆ ಸಿಗುವುದುಂಟೆ.!


ಇನ್ನೇನು ಶುರುವಾಗುವುದೀಗ

ಕುದುರೆ ವ್ಯಾಪಾರದ ಸಂತೆ

ತಂತಮ್ಮ ಸರಕುಗಳ ಉಳಿಸಿಕೊಳ್ಳಲು

ಆಯ್ಕೆ ಆಗುವುದು ರೆಸಾರ್ಟ್ ಎಂಬ ಕೋಟೆ..


ಸಾಮಾನ್ಯ ರಾಜಕೀಯದಲ್ಲಿ ಸೋಲು-ಗೆಲುವು

ಎಲ್ಲದರಲ್ಲೂ ಮಿಂದೆದ್ದರೆ ರಾಜಕೀಯ ಉಳಿವು

ಪಕ್ಷಾಂತರ ಮಾಡಿದರೆ ಶುರು ಅವರ ಅಳಿವು

ಆಗ ಕೇಳೋರ್ಯಾರು ಜನಸಾಮಾನ್ಯರ ನೋವು..!


---ಮಾಗಿದ ಮನಸ್ಸು