ಮಂಗಳೂರು: ಉತ್ತರ ಪ್ರದೇಶದ ದಲಿತ ಯುವತಿ ಮನಿಷಾ ವಾಲ್ಮೀಕಿಯ ಬೆನ್ನು ಮೂಳೆಯನ್ನು ಮುರಿದು, ನಾಲಗೆಯನ್ನು ಕತ್ತರಿಸಿ ಅತ್ಯಾಚಾರ ಮಾಡಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಸತ್ತ ನಂತರ ಆಕೆಯ ಶವವನ್ನು ಅಜ್ಞಾತ ಸ್ಥಳದಲ್ಲಿ ಬರ್ಬರವಾಗಿ ಸುಟ್ಟು ಹಾಕಿದ ಪ್ರಕರಣವನ್ನು ಖಂಡಿಸಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ , ದ.ಕ.ಜಿಲ್ಲಾ ಯುವ ಕಾಂಗ್ರೆಸ್ , ಮತ್ತು ದ.ಕ.ಜಿಲ್ಲಾ ಎನ್.ಎಸ್.ಯು.ಐ ಜೊತೆ ಜಂಟಿಯಾಗಿ ದಿನಾಂಕ 01.10.2020 ಗುರುವಾರದಂದು ಸಂಜೆ 6.30 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಎದುರು ಇರುವ ಗಾಂಧಿ ಪ್ರತಿಮೆಯ ಬಳಿ ಮೊಂಬತ್ತಿ ಉರಿಸಿ ಪ್ರತಿಭಟನೆ ನಡೆಸಲಾಯಿತು.
ಮನೀಷಾ ವಾಲ್ಮೀಕಿಯ ಅತ್ಯಾಚಾರಿ ಕೊಲೆಗಡುಕರಿಗೆ ಅತೀ ಶೀಘ್ರವಾಗಿ ಮರಣ ದಂಡನೆಯನ್ನು ವಿಧಿಸಬೇಕಾಗಿ ಉತ್ತರಪ್ರದೇಶ ಸರ್ಕಾರ ಹಾಗೂ ಸರಕಾರವನ್ನು ಈ ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು.
ಈ ಪ್ರತಿಭಟನೆಯಲ್ಲಿ ದ.ಕ.ಮಹಿಳಾ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋರವರ ನೇತೃತ್ವದಲ್ಲಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು, ಬ್ಲಾಕ್ ನ ಮಹಿಳಾ ಅಧ್ಯಕ್ಷರು, ಮ.ನ.ಪಾ ಮಹಿಳಾ ಸದಸ್ಯರು, ಮ.ನ.ಪಾ ಅಭ್ಯರ್ಥಿಗಳು, ವಾರ್ಡ್ ಮತ್ತು ಬೂತ್ ಮಟ್ಟದ ಮಹಿಳಾ ಪದಾಧಿಕಾರಿಗಳು ಮತ್ತು ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.