ಮಂಗಳೂರು: ಬೆಂದೂರಿನ ಸಂತ ಥೆರೇಸಾ ಶಾಲೆಯಲ್ಲಿ ಪಾಲಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಸಂತ ಥೆರೇಸಾರವರ ಹೆಸರಿನಲ್ಲಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಯನ್ನು ನಡೆಸಲಾಗಿತ್ತು. ಶಾಲಾ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ವಿವಿಧ ಚಟುವಟಿಕೆಗಳನ್ನು ನಡೆಸಲಾಗಿತ್ತು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಾಲಾ ಪ್ರಾಂಶುಪಾಲರಾದ ಭಗಿನಿ ಫಿಲೋಮಿನ್ ಸಲ್ದಾನ್ಹರವರು ಎಲ್ಲರಿಗೂ ಪಾಲಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಈ ಕಾರ್ಯಕ್ರಮವನ್ನು ‘ಯುಟ್ಯೂಬ್’ ಚಾನೆಲ್ ಮೂಲಕ ವಿದ್ಯಾರ್ಥಿಗಳ ಮತ್ತು ಪೋಷಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.