ಉಡುಪಿ ಮಾರ್ಚ್ 21 (ಕರ್ನಾಟಕ ವಾರ್ತೆ): ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿ ತೆರಿಗೆದಾರರು, ತಮ್ಮ ಆಸ್ತಿಯ ಬಾಕಿ ಮತ್ತು ಚಾಲ್ತಿ ಸಾಲಿನ ಆಸ್ತಿ ತೆರಿಗೆ, ನೀರಿನ ತೆರಿಗೆ, ಅಂಗಡಿ ಕೋಣೆಗಳ ಬಾಡಿಗೆ ಮತ್ತು ಉದ್ದಿಮೆ ಪರವಾನಿಗೆಯನ್ನು ಮಾ. 31 ರ ಒಳಗೆ ದಂಡನೆ ಸಮೇತ ಪಾವತಿಸಬೇಕು.
ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಸರಬರಾಜು ಮಾಡುವ ಕುಡಿಯುವ ನೀರನ್ನು ತೋಟ ಗಿಡಗಳಿಗೆ ಬಿಡದೇ ಮಿತವಾಗಿ ಬಳಸಲು ಸೂಚಿಸಿದೆ. ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ತೆರಿಗೆ, ಅಂಗಡಿ ಬಾಡಿಗೆ ಪಾವತಿಸದೇ ಇದ್ದಲ್ಲಿ ಹಾಗೂ ಉದ್ದಿಮೆ ಪರವಾನಿಗೆ ನವೀಕರಣ ಮಾಡದೇ ಇದ್ದಲ್ಲಿ, ಅನಗತ್ಯ ನೀರನ್ನು ಪೋಲು ಮಾಡಿದ್ದಲ್ಲಿ ಪುರಸಭೆ ಕಾಯ್ದೆಯಂತೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.