ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕು.ಕ. ಇಲಾಖೆ, ಜಿಲ್ಲಾ ಸರ್ವೇಕ್ಷಣಾಘಟಕ/ ರಾಷ್ಟಿಯ ತಂಬಾಕು ನಿಯಂತ್ರಣಾ ಕಾರ್ಯಕ್ರಮದ ಸಹಯೋಗದಲ್ಲಿ ,  “ವಿಶ್ವ ತಂಬಾಕು ರಹಿತ ದಿನಾಚರಣೆಯ” ಅಂಗವಾಗಿ ವೀಡಿಯೋ ಸ್ಪರ್ದೆಯನ್ನು ಹಮ್ಮಿಕೊಳ್ಳುತ್ತಿದೆ. ಈ ಸ್ಪರ್ದೆಯಲ್ಲಿ ಭಾಗವಹಿಸಲು ಈ ಕೆಳಗೆ ನಮೂದಿಸಿದ ಮಾನದಂಡಗಳ ಅನ್ವಯ ವೀಡಿಯೋವನ್ನು ಮಾಡಿ ಕಳುಹಿಸುವುದು.

   ವೀಡಿಯೋ ಥೀಮ್/ವಿಷಯ:“ವ್ಯಸನ ಮುಕ್ತ ಭಾರತ ನಿರ್ಮಾಣಕ್ಕಾಗಿ ಯುವಪೀಳಿಗೆಯನ್ನು ತಂಬಾಕು ಉದ್ಯಮಗಳ ಪ್ರೇರಪಣೆಯಿಂದ ರಕ್ಷಿಸುವುದು.”

         18 ರಿಂದ 21 ವರ್ಷದೊಳಗಿನವರು ಸ್ಪರ್ದೇಯಲ್ಲಿ ಭಾಗವಹಿಸಬಹುದಾಗಿದ್ದು,  (ಹೆಸರು ಮತ್ತು ವಯಸ್ಸನ್ನು ನಮೂದಿಸಬೇಕು) ವೀಡಿಯೋದ ನಿರ್ಭಂದಿತ ಸಮಯ: 5 ರಿಂದ 6 ನಿಮಿಷ ಇರಬೇಕು, ವೀಡಿಯೋ ಸಲ್ಲಿಸಲು ಕೊನೆಯ ದಿನಾಂಕ ಮೇ 31 ರ ಮಧ್ಯಾಹ್ನ 12.00 ಗಂಟೆಯಾಗಿದ್ದು, ವಿಜೇತರಿಗೆ ಪ್ರಥಮಾ ಬಹುಮಾನರೂ. 3,000/- ದ್ವಿತಿಯಾ ಬಹುಮಾನರೂ. 2,000/- ತೃತೀಯಾ ಬಹುಮಾನ ರೂ. 1,000/- ನೀಡಲಾಗುವುದು , ಸಿದ್ದಪಡಿಸಿದ ವಿಡಿಯೋವನ್ನು  ಮೊಬೈಲ್ ಸಂಖ್ಯೆ: 8884791809 ಅಥವಾ ಈಮೇಲ್  ವಿಳಾಸ ntcpudupi17@gmail.com ಗೆ ಕಳುಹಿಸುವಂತೆ  ಪ್ರಕಟಣೆ ತಿಳಿಸಿದೆ.