ಅಂದು....
ಅಮೇರಿಕಾದ ಪ್ರಜೆ ವಿವೇಕಾನಂದರಲ್ಲಿ ಕೇಳಿದರು...,
ನನ್ನ ನಾಡಲ್ಲಿ ತಾಯಿಯನ್ನು ಬಿಟ್ಟು
ಉಳಿದವರನೆಲ್ಲಾ ಹೆಂಡತಿಯಂತೆ ನೋಡುವೆವೆಂದು...
ಅದಕೆ ವಿವೇಕಾನಂದರಂದರು…
ನನ್ನ ನಾಡಿನೊಳು, ಹೆಂಡತಿಯನ್ನೊರತುಪಡಿಸಿ ಉಳಿದವರನೆಲ್ಲಾ ತಾಯಿಯಂತೆ ಕಾಣುವೆವೆಂದು....
ಆ ಸತ್ಯದ ನುಡಿಯನ್ನು ಕೇಳಿ ಭಾರತಾಂಬೆಯ ಹೆಮ್ಮೆ ಹಿರಿ ಹಿರಿ ಹಿಗ್ಗಿ ಹಿಗ್ಗಿ ತಲೆ ಎತ್ತಿ ನಿಂತಿದ್ದಳು ....
ಆದರಿಂದು ಕಣ್ ಬಿಟ್ಟು
ನೋಡದಂತಾಗಿದೆ ಭೂಮಾತೆಗೆ...
ತನ್ನೊಡಲಲಿ ಇಂಥಾ ಹೆಣ್ಣುಬಾಕ
ಕ್ರಿಮಿಗಳು ಜನುಮ ಪಡೆದೆವೆಂದು..
ಕೊರಗಿ ಸೊರಗಿ ಕಳೆದುಕೊಳ್ಳುತಿಹಳು ತಾಳ್ಮೆಯ..
ಕದಿಯುತಿಹಳು ರುದ್ರನ ಕ್ರೋಧತೆಯ...
ಉಗುಳುತಿಹಳು ಒಡಲೊಳಗಿನ
ಬೆಂಕಿಯ ಬೇಗುದಿಯಾ...
ಮರೆಯುತಿಹಳು ಮಕ್ಕಳ ಮೇಲಿನ ಮಮತೆಯಾ...
ಮಾತೆಯ ಪ್ರೀತಿಯ ಮತ್ತೇ ಪಡೆಯಲು,
ಇನ್ನಾದರೂ ಮಾನವೀಯತೆಯಿಂದಿರೋಣ....
--ಮಾಗಿದ ಮನಸ್ಸು