10- 12 ತರಗತಿ ಹೊರತುಪಡಿಸಿ ಶಾಲೆ, ಕಾಲೇಜುಗಳ ತರಗತಿ ಪಾಠ ನಿಲ್ಲಿಸಲು ತೀರ್ಮಾನಿಸಿದ ಸಂಪುಟ ಸಭೆಯು ವೀಕೆಂಡ್ ಕರ್ಫ್ಯೂ ಜಾರಿ ಘೋಷಿಸಿದೆ.

ಶುಕ್ರವಾರ ಇರುಳು 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಇರುತ್ತದೆ. ಆಹಾರ ವಸ್ತುಗಳ ಪಾರ್ಸೆಲ್, ಜೀವನಾವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ. ಅದರ ಜೊತೆಗೆ ರಾತ್ರಿ ಕರ್ಫ್ಯೂವನ್ನು ಮತ್ತೂ ಎರಡು ವಾರ ಮುಂದುವರಿಸಲಾಗಿದೆ.