ಮಂಗಳೂರು: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಇವರು ಕಥೋಲಿಕ ಕೈಸ್ತ ಪತ್ರಕರ್ತರನ್ನು ಗುರುತಿಸುವ ಸಲುವಾಗಿ ಕಥೋಲಿಕ ಕ್ರೈಸ್ತ ಪತ್ರಕರ್ತರ ಸಹಮಿಲನ ಹಾಗೂ ಸನ್ಮಾನ ಕಾರ್ಯವನ್ನು ಅ. 22, 2023 ರಂದು ರವಿವಾರ ಸಾಯಂಕಾಲ ಮಂಗಳೂರಿನ ಜೆಪ್ಪು ಸಂತ ಅಂತೋಣಿಯವರ ಆಶ್ರಮದ 'ಸಂಭ್ರಮ' ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|ಪೀಟರ್ ಪಾವ್ ಸಲ್ದಾನ್ಹಾರವರು ಇತರ ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಅಧ್ಯಕ್ಷರಾದ ಆಲ್ವಿನ್ ಡಿ. ಸೋಜಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಆಧ್ಯಾತ್ಮಿಕ ನಿರ್ದೇಶಕರಾದ ಡಾ|ಜೆ.ಬಿ.ಸಲ್ದಾನ್ಹಾ ಮತ್ತು ಆಂತೋಣಿಯವರ ಆಶ್ರಮದ ನಿರ್ದೆಶಕರಾದ ವಂದನೀಯ ಫಾ.ಜೆ. ಬಿ. ಕ್ರಾಸ್ತರವರು ವೇದಿಕೆಯಲ್ಲಿ ಭಾಗವಹಿಸಿದ್ದರು.
ದಾಯ್ಜಿವರ್ಲ್ಡ್ ಮೀಡಿಯಾ ಪ್ರೈ.ಲಿ.ಇದರ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಕರ್ನಾಟಕ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ್, ಕರಾವಳಿ ಸುದ್ದಿ ವಾರ್ತಾ ಪತ್ರ ಇದರ ಸಂಪಾದಕ ಮತ್ತು ಪ್ರಕಾಶಕರಾದ ರೋಷನ್ ಬೊನಿಫಾಸ್ ಮಾರ್ಟಿಸ್ , ಕಥೊಲಿಕ್ ಸಭಾ ಕೇಂದ್ರೀಯ ಕಾರ್ಯದರ್ಶಿಯಾದ ವಿಲ್ಮಾ ಮೊಂತೇರೊ, ಕಾರ್ಯಕ್ರಮದ ಸಂಚಾಲಕರಾದ ಪಾವ್ಲ್ ರೋಲ್ಫಿ ಡಿಕೋಸ್ತಾ ಇವರು ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕ, ಸಂಪಾದಕ ಮತ್ತು ವರದಿಗಾರರಾಗಿ ಟಿ.ವಿ. ಹಾಗೂ ಪತ್ರಿಕಾ ಮಾಧ್ಯಮದ ಮುಖಾಂತರ ಕೆಲಸ ಮಾಡುತ್ತಿರುವ ಕಥೋಲಿಕ ಕ್ರೈಸ್ತ ಸಮುದಾಯದವರನ್ನು ಶೋಲ್ ಹೊದಿಸಿ, ಫಲಪುಷ್ಪ ಮತ್ತು ಸ್ಮರನಿಕೆ ನೀಡಿ ಗೌರವಿಸಲಾಯಿತು. ಅತಿಥಿಗಳು ತಮ್ಮ ಸಂದೇಶವನ್ನು ನೀಡಿ ಮಾಧ್ಯಮ ಮಿತ್ರರನ್ನು ಹುರಿದುಂಬಿಸಿದರು.
ಸಂಚಾಲಕರಾದ ಪಾವ್ಲ್ ರೋಲ್ಫಿ ಡಿ ಕೋಸ್ತಾರವರು ಪ್ರಸ್ತಾವಿಸಿ ಸ್ವಾಗತಗೈದರು. ಅಧ್ಯಕ್ಷರು ಮಾಧ್ಯಮ ಮಿತ್ರರೊಂದಿಗೆ ತಾವು ಮತ್ತು ಕಥೊಲಿಕ್ ಸಭಾ ಇರಲು ಸಿದ್ಧರಿದ್ದೇವೆ ಎಂದು ಸದಾ ತಿಳಿಸಿದರು. ಕಾರ್ಯದರ್ಶಿಯವರು ವಂದನಾರ್ಪನೆಗೈದರು. ನೋರ್ಬಟ್ ಮಿಸ್ಕಿತ್ ಮತ್ತು ಮತ್ತು ಲವೀನಾ ಗ್ರೆಟ್ಟಾ ಡಿಸೋಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಂತಿಮವಾಗಿ ಎಲ್ಲರೂ ಸೇರಿ ಸಹ ಭೋಜನವನ್ನು ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಗಣ್ಯರಾದ ಕೆಪಿಎಸ್‌ಸಿ ಇದರ ಸಮಿತಿ ಸದಸ್ಯರಾದ ರೊನಾಲ್ಡ್ ಫೆರ್ನಾಂಡಿಸ್ ಮಂಗಳೂರು ಧರ್ಮಪ್ರಾಂತ್ಯದ ಪಾಲನ ಮಂಡಳಿಯ ಕಾರ್ಯದರ್ಶಿಯಾದ ಜೋನ್ ಡಿಸಿಲ್ವಾ, ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೊ, ಎಮ್ ಸಿ ಸಿ ಬ್ಯಾಂಕಿನ ಚೇರ್ ಮೆನ್ ಅನಿಲ್ ಲೋಬೊ, ರಾಕ್ಣೊ ಕೊಂಕಣಿ ಪತ್ರಿಕೆಯ ಸಂಪಾದಕರಾದ ವಂದನೀಯ ಫಾ. ರೂಪೇಶ್ ಮಾಡ್ತಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.