ಅಗ್ನಿಪಥದ ವಿರುದ್ಧದ ಪ್ರತಿಭಟನೆ ಈಗ ತೆಲಂಗಾಣ ರಾಜ್ಯದವರೆಗೆ ವ್ಯಾಪಿಸಿದ್ದು, ಸಿಕಂದರಾಬಾದ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಒಬ್ಬರು ಪೋಲೀಸರ ಗುಂಡಿಗೆ ಬಲಿಯಾದರು.

ಮಧ್ಯ ಪ್ರದೇಶದಲ್ಲಿ ಕೆಲವು ಪೋಲೀಸರು ಗಾಯಗೊಂಡರು. ಮುಖ್ಯವಾಗಿ ಹತ್ತಾರು ರಾಜ್ಯಗಳಲ್ಲಿ ರೈಲು ನಿಲ್ದಾಣಗಳಿಗೆ ನುಗ್ಗಿ ನಿಲ್ಲಿಸಿದ್ದ ರೈಲುಗಳಿಗೆ ಹಾನಿ ಮಾಡಿದರು ಇಲ್ಲವೆ ಬೆಂಕಿ ಹಚ್ಚಿದರು. ಹೆದ್ದಾರಿ ತಡೆಯಲ್ಲಿ ದೇಶ ತತ್ತರಿಸಿತು. ಎಲ್ಲ ಬಗೆಯ ವಾಹನಗಳು ಕೆಲವು ಕಡೆ ಎಲ್ಲೆಂದರಲ್ಲಿ ಬಿದ್ದಿದ್ದುದು ಕಂಡು ಬಂದಿತು. 

ಇದರ ನಡುವೆ ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌ರು ಅಗ್ನಿಪಥ ನೇಮಕಾತಿ ಆರಂಭಿಸುವುದಾಗಿ ಹೇಳಿದರು.