ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ 8ನೇ 9ನೇ 10ನೇಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಿಶೇಷವಾದ ಸ್ಫೂರ್ತಿದಾಯಕವಾದ ಮೌಲ್ಯಧಾರಿತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿಯ ವಕೀಲರಾಗಿರುವ ಬಿ ಸುರೇಶ ಗೌಡಅವರು ಅತಿಥಿಗಳಾಗಿ ಪಾಲ್ಗೊಂಡು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಜೀವನದಲ್ಲಿ ನಮ್ಮ ತಂದೆ ತಾಯಿ ಹಾಗೂ ಗುರುಗಳ ಪಾತ್ರ ಬಹಳ ದೊಡ್ಡದು. ಇವರಿಬ್ಬರು ಎರಡು ಕಣ್ಣುಗಳಿದ್ದಂತೆ ಅವರು ತೋರಿಸಿಕೊಟ್ಟ ದಾರಿಯಲ್ಲಿ ನಡೆದರೆ ನಮಗೆ ಯಶಸ್ಸುಖಂಡಿತವಾಗಿ ಸಿಗುತ್ತೆ ಅದಕ್ಕಾಗಿ ನಮಗಾಗಿ ತಮ್ಮ ಕನಸುಗಳನ್ನು ತ್ಯಾಗ ಮಾಡಿದ ತಂದೆ ತಾಯಿಯರಿಗೆ ಮತ್ತು ನಮ್ಮನ್ನು ಜಗತ್ತಿನ ಶ್ರೇಷ್ಠ ವ್ಯಕ್ತಿಗಳಾಗಿ ಮಾಡುವ ಶಿಕ್ಷಕರಿಗೆ ಮೊದಲು ನಾವು ಧನ್ಯವಾದಗಳನ್ನು ಹೇಳಬೇಕು.
ಪ್ರತಿಯೊಬ್ಬ ತಂದೆ ತಾಯಿ ಕಷ್ಟಪಟ್ಟು ಕೆಲಸ ಮಾಡಿ ಸಂಪಾದನೆ ಮಾಡುವುದು ಮಕ್ಕಳಿಗಾಗಿ. ಅವರಿಗಾಗಿ ನೀವು ಕಷ್ಟಪಟ್ಟು ಓದಬೇಕು. ಆದರೆ ಈಗಿನ ಮೊಬೈಲ್ ಕಾಲದ ಕೆಲವೊಂದು ಶಾಲಾ ಕಾಲೇಜು ವಿದ್ಯಾರ್ಥಿಗಳು ಅಪ್ಪ ಅಮ್ಮನ ಶ್ರಮಕ್ಕೆ ಬೆಲೆ ಕೊಡದೆಅವರಿಗೆ ಮೋಸ ಮಾಡಿಕೊಂಡು ಬದುಕುತ್ತಿದ್ದಾರೆ. ಯಾವ ಮಗು ತನ್ನ ಅಪ್ಪ ಅಮ್ಮನ ಕಷ್ಟವನ್ನು ಕಣ್ಣ ಮುಂದೆ ತಂದುಕೊAಡು ಅವರನ್ನು ಗೌರವದಿಂದ ಕಾಣುತ್ತಾರೋ ಅವರು ಜೀವನದಲ್ಲಿ ಖಂಡಿತ ಯಶಸ್ಸು ಕಾಣುತ್ತಾರೆ. ಈಗಿನ ಕಾಲದ ಯುವಜನಾಂಗ ಅಪ್ಪಅಮ್ಮನನ್ನು ದೂರ ಇಟ್ಟು ಮೊಬೈಲ್ ಅನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ಮೊದಲು ಮೊಬೈಲ್‌ನ ದಾಸ್ಯದಿಂದ ಮುಕ್ತರಾಗಿರಿ. ಯಾವುದೇ ಕಾರಣಕ್ಕೂ ಟಿವಿ ಮತ್ತು ಸಿನಿಮಾದ ಮೇಲೆ ಹೆಚ್ಚು ಆಕರ್ಷಿತರಾಗಬೇಡಿ. ಎಷ್ಟೋ ಮಕ್ಕಳ ತಂದೆತಾಯಿಯರು ಕೂಲಿನಾಲಿ ಮಾಡಿಕಷ್ಟ ಪಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಕೊಡ್ತಾ ಇದ್ದಾರೆ ಹಾಗಾಗಿ ನಮ್ಮ ಜೀವನದ ರಿಯಲ್ ಹೀರೋ ನಮ್ಮ ತಂದೆತಾಯಿಯರೇ ಹೊರತು ಮತ್ತಾವ ಸಿನಿಮಾ ನಾಯಕನೋ ನಾಯಕಿಯೋ ಆಗಬಾರದು.
ಪ್ರತಿಯೊಬ್ಬ ತಂದೆತಾಯಿಯು ಮಕ್ಕಳನ್ನು ಹಾಸ್ಟೆಲ್‌ಗೆ ತಂದು ಸೇರಿಸುವ ಉದ್ದೇಶ ಮಕ್ಕಳು ಚೆನ್ನಾಗಿ ಶಿಸ್ತು ಕಲಿತು ವಿದ್ಯಾವಂತರಾಗಲಿ ಎಂದು. ಕಷ್ಟ ಪಟ್ಟು ಇಷ್ಟಪಟ್ಟು ಓದಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ನಂತರ ಮಾತನಾಡಿದ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಅವರು ದೂರದ ಜಿಲ್ಲೆಗಳಿಂದ ಮಕ್ಕಳನ್ನು ತಂದು ಪೋಷಕರು ಇಲ್ಲಿ ಸೇರಿಸಿದ್ದಾರೆ. ಅವರು ಪಡುವ ಕಷ್ಟಗಳನ್ನು ನಾನು ಕಂಡಿದ್ದೇನೆ. ದಯವಿಟ್ಟು ಮಕ್ಕಳು ಹೆತ್ತವರ ಕನಸಿನಂತೆ ಚೆನ್ನಾಗಿ ಓದಿ ಮತ್ತು ನಾವು ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಿರುವ ಈ ಶಾಲೆ ಇದು ನಮ್ಮ ಶಾಲೆ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಇಲ್ಲಿರುವ ಪ್ರತಿಯೊಂದು ವಸ್ತುಗಳು ಆಡಳಿತ ಮಂಡಳಿಯವರು ನಮಗಾಗಿ ನೀಡಿರುತ್ತಾರೆ ಅವುಗಳನ್ನು ಹಾಳು ಮಾಡದೆ ಚೆನ್ನಾಗಿಟ್ಟುಕೊಳ್ಳುವುದು ವಿದ್ಯಾರ್ಥಿ ಆದವನ ಕರ್ತವ್ಯವಾಗಬೇಕು. ಈ ಕಾರ್ಯಕ್ರಮದಲ್ಲಿ ಸುರೇಶರವರು ತಿಳಿಸಿದ ಎಲ್ಲಾ ಮೌಲ್ಯಯುತವಾದ ಮಾತುಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಮಾಜದಲ್ಲಿ ಮತ್ತೊಬ್ಬರ ಕಣ್ಣೀರನ್ನು ಒರೆಸುವ ಉತ್ತಮ ಪ್ರಜೆಯಾಗಿ ನೀವೆಲ್ಲ ನಿರ್ಮಾಣವಾಗಬೇಕು ಎಂದು ಮಕ್ಕಳಿಗೆ ತಿಳಿಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಕೆ. ಸಿ. ನಾÊಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾಗಿರುವ ವೆಂಕಟೇಶ್ ಮೂರ್ತಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಂಗ್ಲ ಶಿಕ್ಷಕಿ ಅಶ್ವಿನಿಯವರು ಕಾರ್ಯಕ್ರಮ ನಿರೂಪಿಸಿದರು.