ಮುಂಬಯಿ: ಮಹಾರಾಷ್ಟ್ರ ರಾಜ್ಯ ಸರಕಾರ ನಡೆಸಿದ 2023-2024ನೇ ಸಾಲಿನ ಎಸ್‌ಎಸ್‌ಸಿ ಐಸಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ವಿಲೇಪಾರ್ಲೆ ಪಶ್ಚಿಮದ ಶ್ರೀ ಚಂದುಲಾಲ್ ನಾನಾವತಿ ವಿನಯ್ ಮಂದಿರ್ ಶಾಲೆಯ ವಿದ್ಯಾಥಿ ಶ್ರುತಿಕ್ ಸುಧಾಕರ ಪೂಜಾರಿ 96% ಅಂಕಗಳೊಂದಿಗೆ ಸರ್ವೋತ್ಕೃಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕುಂದಾಪುರ ಮೂಡಲಕಟ್ಟೆ ಇಲ್ಲಿನ ಸುಧಾಕರ್ ಎ.ಪೂಜಾರಿ (ಭಾರತ್ ಬ್ಯಾಂಕ್‌ನ ಉದ್ಯೋಗಿ, ಬಿಲ್ಲವರ ಅಸೋಸಿಯೇಶನ್‌ನ ಸೇವಾದಳದ ಉಪ ದಳನಾಯಕ) ಮತ್ತು ನಳಿನಿ ಎಸ್. ಪೂಜಾರಿ ದಂಪತಿ ಸುಪುತ್ರರಾಗಿದ್ದಾರೆ.