ಮಂಗಳೂರಿನ ಪಳ್ನೀರ್‍ನ ನಿವಾಸಿ ಇಂದು ಬೆಳಗ್ಗೆ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ’ ಪುರಸ್ಕಾರದೊಂದಿಗೆ ಪ್ರಧಾನ ಮಂತ್ರಿಯವರ ಜೊತೆ ನೇರವಾಗಿ ಮಾತನಾಡಿ, ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಈ ಹಿಂದೆ ಮಂಗಳೂರಿನಲ್ಲಿ ತನ್ನ ನೇತೃತ್ವದಲ್ಲಿ ನಡೆದ ಸರ್ವ ಧರ್ಮ ಸಂಗಮ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭರತ ನಾಟ್ಯ ಪ್ರದರ್ಶನ ನೀಡಿದ ಬಾಲಕಿಗೆ ‘ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲ’ ಪುರಸ್ಕಾರ ದೊರೆತಿರುವುದು, ನನಗೆ ಪ್ರಶಸ್ತಿ ದೊರೆದಂತೆ ಸಂತೋಷವಾಗಿದೆ ಮತ್ತು ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಈ ಸಾಧನೆಯ ಮೂಲಕ ಇನ್ನಷ್ಟು ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕೆಂದು ಎಐಸಿಸಿ ಕಾರ್ಯದರ್ಶಿ, ಮಾಜಿ ಶಾಸಕ ಐವನ್ ಡಿ ಸೋಜರರವರು ತನ್ನ ಕಾರ್ಯಕರ್ತರೊಂದಿಗೆ ಪ್ರಶಸ್ತಿ ವಿಜೇತೆ ರಮೂನ ಪಿರೇರಾರವರ ಮನೆಗೆ ತೆರಳಿ, ಅಭಿನಂಧಿಸಿದರು. 

‘ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ ತನಗೆ ಹೆದರಿಕೆಯಾದರೂ ಸಂತಸ ತಂದಿದೆ. ತಾನು ಹಿಂದಿ ಭಾಷೆಯಲ್ಲಿಯೇ ಮಾತನಾಡಿದೆ’ ಎಂದು ರಮೂನ ತಮ್ಮ ಅನುಭವವನ್ನು ತಿಳಿಸಿದರು. ಅಭಿನಂದಿಸಿದ ಸಮಾರಂಭದಲ್ಲಿ ಐವನ್ ಡಿ ಸೋಜರವರ ಧರ್ಮಪತ್ನಿ ಕವಿತಾ ಡಿ ಸೋಜ, ಭಾಸ್ಕರ್ ರಾವ್, ಆಲಿಸ್ಟನ್ ಡಿ ಕುನ್ಹಾ,  ಹಸನ್ ಪಳ್ಣೀರ್, ಬಾಜಿಲ್ ರೋಡ್ರಿಗಸ್, ಅಬಿಬುಲ್ಲ ಮುಂತಾದವರು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ರಮೂನರವರ ತಾಯಿ ಗ್ಲಾಡೀಸ್ ಪಿರೇರಾರವರು ಉಪಸ್ಥಿತರಿದ್ದರು.