ಮಂಗಳೂರು, ಜನವರಿ 25: ನಾವು ನಾರಾಯಣ ಗುರು ವೃತ್ತ ಎಂದು ಹೆಸರು ಇಡಲು ಹೊರಟಾಗ ಮತ್ತು ಮನವಿ ನೀಡಿದಾಗ ಬೆಂಬಲಿಸದವರು ಈಗ ಸ್ವಾಭಿಮಾನದ ನಡಿಗೆ ಎಂದಿದ್ದಾರೆ. ಅದು ರಾಜಕೀಯ ರಹಿತವಾಗಿದ್ದರೆ ನಾವು ಅದರಲ್ಲಿ  ಖಂಡಿತ ಭಾಗವಹಿಸುತ್ತೇವೆ ಎಂದು ಲಕ್ಷ್ಮೀಶ್ ಸುವರ್ಣ ಹೇಳಿದರು.

ಟ್ಯಾಬ್ಲೊ ವಿಷಯದಲ್ಲಿ ಕೇರಳ ಕೆಲವು ನಿಯಮ ಉಲ್ಲಂಘನೆ ಮಾಡಿದೆ ಎಂದು ಕೇಂದ್ರ ಹೇಳಿದೆ. ಈ‌ ಬಗೆಗೆ ಚರ್ಚೆ ಆಗಬೇಕು. ನಾರಾಯಣ ಗುರುಗಳು ಜಾತಿ, ಗುಂಪು ಮೀರಿದವರು. ನಾರಾಯಣ ಗುರುಗಳ ಹೆಸರಿನಲ್ಲಿ ಯಾರೂ ರಾಜಕೀಯ ಮಾಡಬಾರದು. ಅವರ ತತ್ವ ಪಾಲನೆ ಎಲ್ಲರಿಂದ ಆಗಬೇಕು ಎಂದು ಬಿರುವೆರ್ ಕುಡ್ಲ ನಾಯಕಿ ವಿದ್ಯಾ ಹೇಳಿದರು.

ನಾರಾಯಣ ಗುರುಗಳು ಶೈಕ್ಷಣಿಕ ಕ್ರಾಂತಿಕಾರಿ, ಸಂತ ಸುಧಾರಕ, ಪರಿಸರ ಸ್ನೇಹಿ, ಸಮಾಜದ ಆಸ್ತಿ ಅವರು ಸಮಾಜದ ಆಸ್ತಿ ಆಗಿಯೇ ಉಳಿಯಬೇಕು ಎಂದು ಸಹನಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಿಶೋರ್ ಬಾಬು ಮೊದಲಾದವರು ಉಪಸ್ಥಿತರಿದ್ದರು.