ಚಿಕ್ಕಮಗಳೂರು, ಮಾ.18- ತಾಲ್ಲೂಕಿನ ತೊಗರಿಹಂಕಲ್ ಮಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎ.ಕುಲಶೇಖರ್ ಹಾಗೂ ಉಪಾಧ್ಯಕ್ಷರಾಗಿ ಸಿ.ಎಂ.ಸುಮAತ್ ಅವರು ಅವಿರೋಧ ಆಯ್ಕೆಯಾದರು.

ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಗೊಂಡ ಹಿನ್ನೆಲೆಯಲ್ಲಿ ರಿಟರ್ನಿಂಗ್ ಆಫೀಸರ್ ಡಿ.ಟಿ.ನಾಗರಾಜ್ ಬುಧವಾರ ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಎಂ.ಬಿ.ಕಲ್ಲೇಶ್, ಪದ್ಮನಾಭ, ಮಲ್ಲಪ್ಪ, ಎಸ್.ಎ.ರಮೇಶ್, ಆರ್.ಅಮವಾಸೆ, ವಿ.ಎಸ್. ಜಯರಾಮ್, ಹೆಚ್.ಎನ್.ಶಂಕರೇಗೌಡ, ಉಮಾ, ಕೆ.ಬಿ.ಭವ್ಯ, ಡಿಸಿಸಿ ಬ್ಯಾಂಕ್ ಸೂಪರ್ ವೈಸರ್ ಕೆ.ಆರ್. ರಘು, ಎಂ.ಕೆ.ದಿನೇಶ್, ಎಂ.ಎಸ್.ಪುನೀತ್, ಸಿ.ಆರ್.ಶಿವರಾಜ್, ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್, ಸಂಘದ ಕಾರ್ಯದರ್ಶಿ ಪ್ರಶಾಂತ್, ಸಿಬ್ಬಂದಿ ಪವನ ಮತ್ತಿತರರು ಹಾಜರಿದ್ದರು.