ಮಂಗಳೂರು: 2019 ರಲ್ಲಿ ಸಮುದ್ರದ ಬದಿಗೆ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಸಮುದ್ರದ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದ ಮಹಮ್ಮದ್ ಸಾಹಿಲ್ ರವರ ತಂದೆ ಯವರಾದ ಮಹಮ್ಮದ್ ಅಲ್ತಾಫ್ ಬೆಂಗ್ರೆಯವರಿಗೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರಿಂದ ರೂ. 6.00 ಲಕ್ಷ ದ ಚೆಕ್ ವಿತರಣೆ.
ಸಮುದ್ರದ ಬದಿಗೆ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಸಮುದ್ರದ ನೀರಿನಲ್ಲಿ ಮುಳುಗಿ ಮಹಮ್ಮದ್ ಸಾಹಿಲ್ ಆರು ವರ್ಷಗಳ ಹಿಂದೆ ಸಾವನಪ್ಪಿದ್ದು, ಈ ಪ್ರಕಟಣದಲ್ಲಿ ಪರಿಹಾರ ನೀಡಬೇಕೆಂದು ಕಳೆದ ಕೆಡಿಪಿ ಸಭೆಯಲ್ಲಿ ಚರ್ಚಿಸಿ, ನಿಧನರಾದವರು ಮೈನರ್ ಎಂಬ ಕಾರಣಕ್ಕಾಗಿ ಅವರಿಗೆ ಪರಿಹಾರ ನೀಡದೇ ಇದ್ದುದನ್ನು ಮನಗಂಡು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಕೆಡಿಪಿ ಸಭೆಯಲ್ಲಿ ಪರಿಹಾರ ನೀಡಲೇಬೇಕೆಂದು ಒತ್ತಾಯಿಸಿದಾಗ ಈ ಬಗ್ಗೆ ತೀರ್ಮಾನದಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ರವರ ನಿರ್ದೇಶನದಂತೆ ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯರವರ ಗಮನಕ್ಕೆ ತಂದು, ಐವನ್ ಡಿʼಸೋಜಾರವರ ಒತ್ತಾಯದ ಮೇರೆಗೆ ಇಂದು ಪರಿಹಾರ ಧನ ನೀಡಿದ್ದು, ಅದರಂತೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಮಹಮ್ಮದ್ ಸಾಹಿಲ್ರವರ ಮನೆಗೆ ಇಂದು ತೆರಳಿ ರೂ.6.00ಲಕ್ಷದ ಚೆಕ್ನ್ನು ತಂದೆಯವರಾದ ಮಹಮ್ಮದ್ ಅಪ್ತಾಫ್ ಬೆಂಗ್ರೆಯವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶರಾದ ದಿಲೀಪ್ ನಾಗರಾಜ್, ಮೊಗವೀರ್ ಮಹಾಜನ ಸಂಘದ ಅಧ್ಯಕ್ಷರಾದ ಚೇತನ್ ಬೆಂಗ್ರೆ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಅಬುಬಕ್ಕರ್, ಫಯಾಜ್ ಬೆಂಗ್ರೆ, ಮನುರಾಜ್, ಭಾಸ್ಕರ್ ರಾವ್, ಮಾಜಿ ಕಾರ್ಪೋರೇಟರ್ ಸ್ಟೀಫನ್ ಮರೋಳಿ, ಮುಂತಾದವರು ಜೊತೆಗಿದ್ದರು.