ತೊರೆದು ಹೋಗದಿರು ಗೆಳೆಯಾ. ..

ತೊರೆದು ಹೋಗದಿರು ಗೆಳೆಯಾ. ..

ಶರಣಾಗಿಹ ಈ ಮುಗ್ಧಳ ಮನವ...

ಕಾಡುವುದೀ ಪರಿ ಸರಿಯೇ. ..


ಪ್ರೇಮ ಕಾಮವ ಬದಿಗಿರಿಸಿಹೆ ನಾ...

ಸ್ನೇಹದೀಪವೊಂದೇ. .ನನ್ನೆದೆಯಲಿ 

ತುಸು ಬೆರೆತಿದೆ ಅನುರಾಗದ ತೈಲವು. .

ಸಹಿಸುವೆಯ ನೀನೂ ಕೇಳೂ..

ತಪ್ಪಿದ್ದರೆ ಕ್ಷಮಿಸುವೆಯಾ ನೀನೂ...?


ತೊರೆದು ಹೋಗುವುದು ಸರಿಯೇ

ತೊರೆದು ಹೋಗುವುದು ಸರಿಯೇ

ಶರಣಾಗಿಹ ಈ ಮುಗ್ಧಳ ಮರೆತೂ.


ಕೋಪ ತಾಪವ ಬದಿಗಿರಿಸುವೆ ನಾ 

ಸಲಿಸು ಸಹನೆ ದೀಕ್ಷೇ. ..

ಅಭಿಮಾನದಿ ಅನುಮಾನವಿದೇನೂ

ಬೇಕೆ ಈ ಪರೀಕ್ಷೆ. ...?

ಸಹಿಸೆ ಮೌನ ಶಿಕ್ಷೆ. ....ಕೇಳು

ನೀಡು  ನನಗೆ ಸ್ನೇಹ ರಕ್ಷೆ. ....


ತೊರೆದು ಹೋಗುವುದು ತರವೇ 

ತೊರೆದು ಹೋಗುವುದು ತರವೇ

ಶರಣಾಗಿಹ ಈ ಮುಗ್ಧಳ ಮರೆತೂ..


ಈ ಬರಹದೂರಲಿ ಕುರಡಿಯು ನಾನೂ. ..

ಕೈಹಿಡಿದೂ ನೀ ದಡ ಸೇರಿಸೂ...

ದೀನಳು ನಾನು, ದಯಾಳುವು ನೀನೂ. ..

ದಯಮಾಡೂ ನನ್ನೆಡೆ ಕೃಪೆ ತೋರೂ. ..


ತೊರೆದು ಹೋಗುವುದು ತರವೇ...

ಮರೆತು ಹೋಗುವುದು ಸರಿಯೇ. .

ಶರಣಾಗಿಹ ಈ ಮುಗ್ಧಳ ಮರೆತೂ..

ಹೋಗುವುದುಚಿತವೆ. ..ಹೇಳು. ..?


ತೊರೆದು ಹೋಗದಿರು ಗೆಳೆಯಾ. ...



-By ನಾಗರತ್ನ ಎಂ. ಹೊಳ್ಳ 

(ಸುಮತಪಸ್ವಿನಿ) 

ನರಸಿಂಹರಾಜಪುರ

ಚಿಕ್ಕಮಗಳೂರು