ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಇಲ್ಲಿಗೆ ಸಮೀಪದ ಅಳಿಯೂರಿನಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಿತು. ಪಂದ್ಯಾಟವನ್ನು ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ನೆಲ್ಲಿಕಾರು ಗ್ರಾ.ಪಂ. ಅಧ್ಯಕ್ಷ ಉದಯ ಪೂಜಾರಿ, ಯೋಜನೆಯ ಲಕ್ಷ್ಮಣ ಸುವರ್ಣ, ಶ್ರೀಧರ ಬಂಗೇರ, ಅರುಣ್ ಶೆಟ್ಟಿ, ರುಕ್ಮಯ್ಯ ಪೂಜಾರಿ, ಸುರೇಶ್ ಶೆಟ್ಟಿ, ರಾಮನಾಥ ಸಾಲಿಯಾನ್, ಆದಿ ರಾಜ ಜೈನ್, ಗಣೇಶ್ ಬಿ, ನಿತ್ಯಾನಂದ ಶೆಟ್ಟಿ, ಹಾಜರಿದ್ದರು. ಮು.ಶಿ. ಚಿನ್ಮಯಾನಂದ ಸ್ವಾಗತಿಸಿದರು.