ಮಂಗಳೂರು: ಮೇ 1ರ ಸೊಮವಾರ ಮೇ ದಿನಾಚರಣೆ ಅಂಗವಾಗಿ ಸಿಪಿಎಂ ನೇತೃತ್ವದಲ್ಲಿ ಮೇ ದಿನ ಆಚರಣಾ ಸಮಿತಿಯವರು ಸರ್ವೀಸ್ ಬಸ್ ನಿಲ್ದಾಣದಿಂದ ಡಾನ್ ಬಾಸ್ಕೋ ಹಾಲ್‌ವರೆಗೆ ಆಕರ್ಷಕ ಮೆರವಣಿಗೆ ನಡೆಸಿದರು. 

ಕೋಮುವಾದ, ಕಾರ್ಪೊರೇಟ್ ಸಂಸ್ಥೆಗಳ ಅಕ್ರಮ ಕೂಟಗಳ ಹುನ್ನಾರ, ರಾಜ್ಯ ಸರಕಾರವು ಕೆಲಸದ ಅವಧಿ 12 ಗಂಟೆಗೇರಿಸಿದ್ದರ ವಿರುದ್ಧ ಮತ್ತು ಕಾರ್ಮಿಕರ ಕಲ್ಯಾಣದ ಪರ ಘೋಷಣೆಗಳು ಮೊಳಗಿದವು.

ಸರ್ವಿಸ್ ಬಸ್ ನಿಲ್ದಾಣದಿಂದ ಹೊರಟ ಆಕರ್ಷಕ ಮೆರವಣಿಗೆಯ ಕೆಲವು ದೃಶ್ಯಗಳು.

ಡಾ. ಕೃಷ್ಣಪ್ಪ ಕೊಂಚಾಡಿ, ಜೆ. ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು ನೇತ್ರತ್ವದಲ್ಲಿ ನಡೆದ ಮೆರವಣಿಗೆಯು ಡಾನ್ ಬಾಸ್ಕೋ ಹಾಲ್‌ನಲ್ಲಿ ಸಮಾವೇಶಗೊಂಡಿತು. ಈ ಸಂದರ್ಭದಲ್ಲಿ ಹೋರಾಟ, ಚಳವಳಿಗಳನ್ನು ತೀವ್ರಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಕೆ. ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ವಸಂತ ಆಚಾರಿ, ಜಯಂತಿ ಶೆಟ್ಟಿ, ಸುಕುಮಾರ್, ಪದ್ಮಾವತಿ, ಸದಾಶಿವದಾಸ್ ಮೊದಲಾದವರು ಉಪಸ್ಥಿತರಿದ್ದರು.