ಔರಾದ ತಾಲಾಕಿನ ಹೆಡಗಾಪುರ ಗ್ರಾಮದಲ್ಲಿ ನಿನ್ನೆ ಸಂಜೆ ಹಳ್ಳದಲ್ಲಿ ಕೊಚ್ಚಿ ಹೋದ ಮೂವರು ಹೆಣ್ಣು ಮಕ್ಕಳ ಶವವನ್ನು ಪೋಲೀಸರು ಮತ್ತು ಅಗ್ನಿ ಶಾಮಕ ದಳದವರು ಸೋಮವಾರ ಹೊರಕ್ಕೆ ತೆಗೆದರು.
ಹೊಲಕ್ಕೆ ಹೋದವರು ಹಿಂತಿರುಗುವಾಗ ಭಾರೀ ಮಳೆ ಬಂದುದರಿಂದ ಹಳ್ಳ ತುಂಬಿ ಹರಿಯುತ್ತಿತ್ತು. ದಾಟುವಾಗ ಕುಟುಂಬದ ನಾಲ್ವರೂ ಕೊಚ್ಚಿ ಹೋದರು. ಗಂಡ ಸಂಗಪ್ಪ ದೂರದಲ್ಲಿ ಈಜಿ ದಡ ಸೇರುವಲ್ಲಿ ಸಫಲನಾದ. ಆದರೆ ಮಡದಿ 41ರ ಸುನಂದ, ಮಗಳಂದಿರಾದ 18ರ ಸಮೀತ, 14ರ ಐಶ್ವರ್ಯ ಪತ್ತೆಯಾಗಿರಲಿಲ್ಲ. ಹುಡುಕಾಟದ ಬಳಿಕ ಮೂವರ ಶವವನ್ನು ಮರುದಿನ ಹೊರ ತೆಗೆಯಲಾಯಿತು.
ಹೈದರಾಬಾದ್ ಕರ್ನಾಟಕದ ಹಲವೆಡೆ ಭಾರೀ ಮಳೆ ಆಗುತ್ತಿದೆ.