ಮಂಗಳೂರು, ನ 17: ಧರ್ಮಭಗಿನಿ ಮೇರಿ ಆಂಜ್ ಸಾವಿರಾರು ಕನ್ನಡ ಕೊಂಕಣಿ ಇಂಗ್ಲೀಷ್ ಭಾಷೆಗಳ ಲೇಖನಗಳನ್ನು ಬರೆದು ಜನರ ಜೀವನದ ದೀಪವಾದರು. ಜನರನ್ನು ‌ಅರಳಿಸುವ ಜೊತೆಗೆ ತನ್ನ ಅನಾರೋಗ್ಯದ ಕತ್ತಲೆಯಲ್ಲಿ ತಾನೇ ದೀಪವಾಗಿ‌ ಬೆಳಕಾಗಿ ಸಾರ್ಥಕ ಆದರು ಎಂದು ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಹೇಳಿದರು.

ಅವರು ಲೇಖಕಿ ಸಾಹಿತಿ‌ ಆದ‌  ದಿವಂಗತರಾದ ಮೇರಿ‌ ಆಂಜ್ ಅವರ ಶೃದ್ಧಾಂಜಲಿ ಸಭೆಯಲ್ಲಿ ‌ಮಾನಾಡಿದರು.

ಮದರ್ ಹೌಸ್ ಕಂಸಿಲರ್ ಧರ್ಮಭಗಿನಿ ಶೈಲಾ ಬಿಎಸ್ ಮಾತನಾಡಿ ಇಡೀ ಬೆಥನಿ ಧರ್ಮಭಗಿನಿಯರಿಗೆ ಮೇರಿ ಆಂಜ್ ಮಾದರಿ ಆಗಿದ್ದರು. ಅವರು ಸಾಹಿತ್ಯದಲ್ಲಿ ಮಾಡಿದ ಕೃಷಿ ವರ್ಷಾನುಗಟ್ಟಲೆ ಅವರ ಹೆಸರು ಉಳಿಸುತ್ತದೆ ಎಂದರು.

ಕಾಂನ್ವೆಂಟ್ ಸುಪೀರಿಯರ್ ಡೊನಾ ಬಿಎಸ್, ಸೈಂಟ್ ಥೆರೆಸಾದ ಪ್ರಾಂಶುಪಾಲರಾದ ಸಿ ಲೂರ್ಡಸ್ ಬಿಎಸ್,ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಅಧ್ಯಕ್ಷ ಕೆ ವಸಂತ ರಾವ್, ಕಾರ್ಯದರ್ಶಿ ರೇಮಂಡ್ ಡಿಕೂನಾ, ಕೊಂಕಣಿ ನಾಟಕ ಸಭಾದ ಖಜಾಂಜಿ ಜೆರಿ ಕೊನ್ಸೆಸೊ,ಪೆಟ್ಸಿ‌ ಬ್ರಿಟ್ಟೊ,ಓಸ್ವಾಲ್ಡ್ ಫೆರ್ನಾಂಡೀಸ್, ಶಿಕ್ಷಕ ರಾಜೇಶ್ ,ಜೋನ್ ತಾವ್ರೊ ದಿವೊ ಪತ್ರಿಕೆಯ ಹಿರಿಯ ನವೀನ್ ಕುಲ್ಶೆಕರ್‌  ಗಣ್ಯರು ಉಪಸ್ಥಿತರಿದ್ದರು.

ಮೊದಲಿಗೆ ಪತ್ರಕರ್ತ ರೇಮಂಡ್ ಡಿಕೂನಾ ಅವರು ನಿರೂಪಿಸಿ ಧರ್ಮಭಗಿನಿ ಮೇರಿ ಆಂಜ್ ಜೀವನದ ಬಗ್ಗೆ ಮಾಹಿತಿಯನ್ನು ನೀಡಿ ವಂದಿಸಿದರು.