ಮಂಗಳೂರು, ಮೆ 04: ನಗರದ ಹಳೇ ಬಂದರು ಪ್ರದೇಶದಲ್ಲಿ ಇರುವ ಹಿದಾಯತ್ ಸೆಂಟರ್‌ನಲ್ಲಿ ಮಂಗಳೂರು ನಗರದ ಪತ್ರಕರರಿಗಾಗಿ ಈದುಲ್ ಫಿತರ್ ಪ್ರಯುಕ್ತ ಸಹಭೋಜನವನ್ನು ಸನ್ಮಾರ್ಗ ಮಾದ್ಯಮ ವಿಭಾಗ ಆಯೋಜಿಸಿತ್ತು.

ಕಾರ್ಯಕ್ರಮದ ಮುಖ್ಯ ಅಥಿತಿ ದ ಕ‌ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಯಾರಾದರೂ ಬ್ರ್ಯಾಂಡ್ ಮಂಗಳೂರು ಇಂತಹ ಕಾರ್ಯಕ್ರಮ ಮಾಡಿ ಒಟ್ಟಾಗಿ ಜೀವಿಸುವ ಸುಖದ ಗುಟ್ಟು ರಟ್ಟು ಮಾಡಿದರೆ ಸೊಗಸು ಅಂದರು.

ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ ಒಬ್ಬರಿಗೊಬ್ಬರು ನೋವು ಮತ್ತು  ನಲಿವು ಫೀಲ್ ಮಾಡಿದರೆ ಹೊಡಿಬಡಿ,ಅವಹೇಳನ ಮಾಡಲು ಯಾರೂ ಮುಂದೆ ಬರುವುದಿಲ್ಲ. ಅವರವರ ಪರಿಧಿಯಲ್ಲಿ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು ಎಂದರು.

ವಾರ್ತಾ ಭಾರತಿಯ ಬ್ಯೂರೊ‌ ಮುಖ್ಯಸ್ಥರಾದ ಪುಷ್ಪರಾಜ್ ಮಾತನಾಡಿ ಪತ್ರಿಕೆಯ ಈ ಎಲ್ಲಾ ಸಹೋದ್ಯೋಗಿಗಳು ಜತೆ ಸೇರಿ ಭೋಜನ ಸ್ವೀಕರಿಸುವುದು ಒಂದು ಮಾದರಿ ಸಹಬಾಳ್ವೆ ಎಂದರು.

ಪಿಂಗಾರ‌ ಪತ್ರಿಕೆಯ ಸಂಪಾದಕರು ಹಿರಿಯರಾದ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ ಧರ್ಮಗಳು ಏಷ್ಯಾದ ಕೊಡುಗೆ. ತಿರುಳು ಏಕದೇವನ ಬಗ್ಗೆ ಮಾತ್ರ.ಆಚರಣೆಗಳಲ್ಲಿ ಭಿನ್ನತೆ ಇದೆ. ನಾವು ಒಬ್ಬೊಬ್ಬರೇ ನಡೆದರೆ ವೇಗವಾಗಿ ನಡೆಯಬಹುದು ಆದರೆ ಜೊತೆಯಲ್ಲಿ ನಡೆದರೆ ಬಹಳ ದೂರದವರೆಗೆ ಸುಖ ದುಃಖ ಹಂಚಿಕೊಂಡು ನಡೆಯಬಹುದು ಎಂದರು.

ಸನ್ಮಾರ್ಗಾ ಅಂತರ್ಜಾಲ ವಾಹಿನಿಯ ಸುದ್ದಿವಾಚಕಿ ಆದ ಪ್ರೀಯಾ ಸುದೆಶ್ ಮಾತನಾಡಿ ಪ್ರಚಾರದಿಂದ ಆಗುವ ಆತಂಕವನ್ನು ಜೊತೆಯಲ್ಲಿ ಇದ್ದು ಪರಿಹರಿಸಲು ಇಲ್ಲಿ ಕೆಲಸದ ಭದ್ರತೆ ಮತ್ತು ತೃಪ್ತಿಯ ಜೀವನ ನನ್ನದು ಎಂದರು.

ಹಿರಿಯರೂ, ಜಮಾತೆ ಇಸ್ಲಾಮಿ ಹಿಂದ್‌ ಮಂಗಳೂರು ನಗರ ಅದ್ಯಕ್ಷರೂ ಆದ ಕೆ ಎಂ ಆಶ್ರಫ್ ಅವರು ಅಧ್ಯಕ್ಷೀಯ ಮಾತುಗಳಲ್ಲಿ ಈದುಲ್ ಫಿತರ್ ಮಹತ್ವ ಮತ್ತು ಪತ್ರಿಕೆಯ ದಿನಮಾನದ ಆಗುಹೋಗುಗಳ ಪತ್ರಕರ್ತರ ಜೊತೆಯಲ್ಲಿ ಭೋಜನ ಒಂದು ಹೊಸ ಹುಮ್ಮಸ್ಸು ನೀಡುವಂತಹ ಕಾರ್ಯವಾಗಿದೆ ಎಂದರು.


ಮೊದಲಿಗೆ ಸ್ವಾಗತ ಮಾಡಿದ ಸನ್ಮಾರ್ಗ ವಾಹಿನಿಯ ಸಂಪಾದಕರಾದ ಎ ಕೆ ಕುಕ್ಕಿಲ ಅವರು ಹಬ್ಬ ಮತ್ತು ಆಚರಣೆ ಮುಖ್ಯ ಆಗುವುದು ಅದನ್ನು ಯಾರ ಜೊತೆಯಲ್ಲಿ ಆಚರಿದಿ ಸಂಭ್ರಮಿಸಿದೆವು ಎಂಬ ವಿಚಾರದಿಂದ ಎಂದರು.

ಶೌಕತ್ ಆಲಿ ನಿರೂಪಿಸಿ‌, ಸನ್ಮಾರ್ಗದ ಪ್ರಬಂಧಕರಾದ‌ ಮೊಹ್ಸಿನ್ ವಂದಿಸಿದರು.