ಕಾರ್ಕಳ: ಮೀಯಾರು ಕಂಬಳ ಸಮಿತಿ ನವೋದಯ ಗ್ರಾಮ ವಿಕಾಸ ಚ್ಯಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಜನವರಿ 3 ರಂದು 22 ನೇ ವರ್ಷದ ಮಿಯಾರು ಲವ-ಕುಶ ಜೋಡುಕೆರೆ ಕಂಬಳ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಿಯರು ಕಂಬಳವು ಅತ್ಯಧಿಕ ಸೌಲಭ್ಯಗಳನ್ನು ಹೊಂದಿರುವ ವಿಶಿಷ್ಟ ಕಂಬಳವಾಗಿದ್ದು ಸಂಪ್ರದಾಯ ಶಿಸ್ತು ಹಾಗೂ ಸಮಯ ಪಾಲನೆಗೆ ಹೆಸರಾಗಿದೆ. ಸುಮಾರು 200 ಕ್ಕೂ ಅಧಿಕ ಜೋಡಿ ಕೋಣಗಳು ಭಾಗಿಯಾಗಲಿವೆ ಎಂದು ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳಿಗ್ಗೆ 8.30ಕ್ಕೆ ಕಂಬಕ್ಕೆ ಚಾಲನೇ ನೀಡಲಾಗುವುದು. ಶ್ರೀ ಮಾಹಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್, ಮಿಯರು ಚರ್ಚ್ ಗುರುಗಳಾದ ವಂದನಿಯ ಕ್ಯಾನುಟ್ ಬರ್ಬೋಜಾ, ಮಿಯರು ಜಾಮಿಯಾ ಮಸೀದಿಯ ಗುರುಗಳಾದ ರಾಜಿಕ್ ಅಹಮದ್, ಗ್ರಾಮ ಪಂಚಾಯತ್ ಅಧ್ಯಕ್ಷ ಸನ್ಮತಿ ನಾಯಕ್, ರಾಜ್ಯ ಸಹಕಾರ ಮಾರಾಟ ಮಂಡಳ ಅಧ್ಯಕ್ಷ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.
ಸಮಿತಿಯ ಕಾರ್ಯಧ್ಯಕ್ಷ ಜೀವನ್ ಅಡ್ಯಾತನ್, ಉಪಾಧ್ಯಕ್ಷರಾದ ಉದಯ ಎಸ್. ಕೋಟಿಯಾನ್, ಅಂತೋನಿ ನಕ್ರೆ, ತೀರ್ಪುಗಾರರಾದ ರವೀಂದ್ರ ಕುಮಾರ್, ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಶಾಮ್ ಎನ್ ಶೆಟ್ಟಿ, ಹಾಗೂ ಸಮೀತಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.