ಕಾರ್ಕಳ, ಮೆ 06: ವಿಧಾನಸಭಾ ಚುನಾವಣೆಯ ಅಂತಿಮ ಪ್ರಚಾರದಲ್ಲಿ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಅಧಿತ್ಯನಾತ್ ಬೃಹತ್ ರೋಡ್ ಶೊ ಆಯೋಜಿಸಲಾಯಿತು. ಕಾರ್ಕಳದ ಅನಂತಶಯನ ವೃತ್ತದಿಂದ ಗಾಂಧಿ ಮೈದಾನದವರೆಗೆ ನಡೆಯಿತು.

ನೂರಾರು ಅಭಿಮಾನಿಗಳು ಈ ಭವ್ಯ ರೋಡ್ ಶೋನಲ್ಲಿ ಪಾಲ್ಗೊಂಡು ತಮ್ಮ ಬೆಂಬಲವನ್ನು ಪ್ರದರ್ಶಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಇಂಧನ ಸಚಿವರಾದ ಹಾಗೂ ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಅನೇಕ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಉಪಸ್ಥಿತರಿದ್ದರು.